ಹಳೆಯಂಗಡಿ: ಬೆಳಗ್ಗೆಯೇ ಮನೆ ಮನೆಗೂ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರು ಶ್ರಮಜೀವಿಗಳಾಗಿದ್ದು, ಅವರನ್ನು ಸಮಾಜ ಗುರುತಿಸಿ ಸೇವೆಗೆ ಮನ್ನಣೆ ನೀಡುವುದು ಅಗತ್ಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿದರು.
ಇಪ್ಪತ್ಮೂರು ವರ್ಷಗಳಿಂದ ಮೂಲ್ಕಿ ಪರಿಸರದಲ್ಲಿ ಪತ್ರಿಕೆ ಮತ್ತು ಹಾಲು ವಿತರಿಸುತ್ತಿರುವ ಕಡವಿನಬಾಗಿಲು ನಿವಾಸಿ ಸತೀಶ್ ದೇವಾಡಿಗ ಅವರನ್ನು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು.
ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ವಿಲ್ಮಾ ಡಿಕೊಸ್ಟ, ಕಾಂಗ್ರೆಸ್ ನಾಯಕರಾದ ಗೋಪಿನಾಥ ಪಡಂಗ, ಮಯ್ಯದ್ದಿ ಗುತ್ತಗಾಡು, ಮಂಜುನಾಥ ಕಂಬಾರ, ಶಾಹುಲ್ ಹಮೀದ್ ಬಜ್ಪೆ, ರಕ್ಷಿತ್ ಕೊಳಚಿ ಕಂಬಳ ಮತ್ತಿತರರು ಉಪಸ್ಥಿತರಿದ್ದರು.