ಜಿಲ್ಲೆ

ನಮಡನೆ ಉಪ್ಪಡ್ ನಾಟಕಕ್ಕೆ ಮುಹೂರ್ತ

ಸೌಮ್ಯ ಆರ್

ಗುರುಪುರ: ಕುಪ್ಪೆಪದವು ಕುಲವೂರಿನ ‘ಉತ್ಸಾಹಿ ತರುಣರು’ ಕಲಾವಿದರು ಅಭಿನಯಿಸಲಿರುವ ತಿಲಕ್‌ರಾಜ್ ಕಷ್ಣಾಪುರ ವಿರಚಿತ ‘ನಮಡನೆ ಉಪ್ಪಡ್’ ತುಳು ನಾಟಕದ ಮುಹೂರ್ತ ಕುಪ್ಪೆಪದವು ಶ್ರೀ ದುರ್ಗೇಶ್ವರೀ ದೇವಿ ದೇವಸ್ಥಾನದಲ್ಲಿ ಕ್ಷೇತ್ರದ ಅರ್ಚಕ ಗುರುಪ್ರಸಾದ್ ಕಾರಂತ ಅವರಿಂದ ಸೋಮವಾರ ನೆರವೇರಿತು.

ಮುತ್ತೂರು ಗ್ರಾ.ಪಂ. ಅಧ್ಯಕ್ಷ ಜಗದೀಶ ಪಾಕಜೆ, ವಿನೋದ್ ಕುವಾರ್ ಅಂಬೆಲೊಟ್ಟು, ಸೋಮಶೇಖರ ಸುವರ್ಣ ಬನದಬಳಿ, ಹರೀಶ್ ಸುವರ್ಣ ಅಂಬೆಲೊಟ್ಟು, ಚಂದ್ರಹಾಸ ಅಗರಿ, ಉತ್ಸಾಹಿ ತಂಡದ ಸಲಹೆಗಾರ ಉಮೇಶ್ ಸಾಲ್ಯಾನ್, ಅಧ್ಯಕ್ಷ ಚಂದ್ರಶೇಖರ ಅಗರಿ, ನಾಟಕ ನಿರ್ದೇಶಕ ಗಣೇಶ್ ಪಾಕಜೆ, ತಂಡದ ಪ್ರಧಾನ ಕಾರ್ಯದರ್ಶಿ ದುಗ್ಗಪ್ಪ ಬಂಗೇರ ಬೊಳಿಯ, ಕೋಶಾಧಿಕಾರಿ ಅಶೋಕ್ ಕಟ್ಟೆವಾರ್, ಕಲಾ ಕಾರ್ಯದರ್ಶಿ ಹರೀಶ್ ಕೆಡಿಎಂ, ತಂಡದ ಕಲಾವಿದರು, ತಂಡದ ಹಿತೈಷಿಗಳು ಉಪಸ್ಥಿತರಿದ್ದರು.