ಹಟ್ಟಿಚಿನ್ನದಗಣಿ: ಭಾವೈಕ್ಯತೆ ಬೆಸೆಯುವ ಮೊಹರಂ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಿ ಎಂದು ಲಿಂಗಸುಗೂರು ಡಿವೈಎಸ್ಪಿ ಎಸ್.ಮಂಜುನಾಥ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಂಗಳವಾರ ಮಾತನಾಡಿದರು.
ಹಬ್ಬಗಳಲ್ಲಿ ಸಾರ್ವಜನಿಕರು ಸಂಭ್ರಮದಿಂದ ಆಚರಿಸಬೇಕು. ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಕಾನೂನು ಮೀರಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಡಿ.ಎಸ್ ಜಮಾದಾರ್, ಪಟ್ಟಣದ ದಳಪತಿ ಗುಂಡಪ್ಪಗೌಡ ಪೊಲೀಸ್ ಪಾಟೀಲ್, ಪಿಎಸ್‌ಐ ಧರ್ಮಣ್ಣ, ಸಿಬ್ಬಂದಿ ಹುಚ್ಚರೆಡ್ಡಿ, ಹನುಮಂತನಾಯ್ಕ, ಪ್ರಮುಖರಾದ ಮೈನುದ್ದೀನ್, ಪಾಷಾ, ರವಿ ಉಳಿಮೇಶ್ವರ, ಮೌಲಾಸಾಬ್, ಅಸ್ಲಾಂ ಇದ್ದರು.