ವಿದೇಶಿ ಪ್ರವಾಸಿ ರಾಬರ್ಟ ಗಿಲ್ ಮುದಗಲ್ ಕೋಟೆಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು.  
ಜಿಲ್ಲೆ

ಮುದಗಲ್ ಕೋಟೆ ವೀಕ್ಷಿಸಿದ ವಿದೇಶಿ ಪ್ರವಾಸಿಗ

ಶಶಿಧರ ಎಲ್

ಮುದಗಲ್: ಪಟ್ಟಣದಲ್ಲಿರುವ ಎರಡು ಸುತ್ತಿನ ಕೋಟೆಗೆ ಥೈಲ್ಯಾಂಡ್ ದೇಶದ ರಾಬರ್ಟ ಗಿಲ್ ಬುಧವಾರ ಭೇಟಿ ನೀಡಿದರು. ಕೋಟೆಯಲ್ಲಿನ ಶಾಸನಗಳು ಮತ್ತು ಶಿಲಾಕೃತಿಗಳ ಫೋಟೊ ಸೆರೆಹಿಡಿದು ಸಂಭ್ರಮಿಸಿದರು.

ಕಳೆದ ಒಂದು ತಿಂಗಳಿಂದ ಚಿತ್ರದುರ್ಗ, ಬಾದಾಮಿ, ಐಹೊಳೆ, ಪಟ್ಟದಕಲ್ಲುಗೆ ಭೇಟಿ ನೀಡಿದ್ದು, ಮುದಗಲ್ ಕೋಟೆ ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ತಿಳಿದು ನೋಡಲು ಬಂದಿದ್ದೇನೆ. ಮುಂದಿನ ಪೀಳಿಗೆಗೆ ಇತಿಹಾಸ ಪರಿಚಯಿಸಲು ಕೋಟೆ ಸಂರಕ್ಷಣೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಕಳೆದ ಒಂದು ತಿಂಗಳಿಂದ ಕರ್ನಾಟಕದ ಕೋಟೆಗಳ ಪ್ರವಾಸ ಕೈಗೊಂಡಿದ್ದು, ಮುದಗಲ್ ಕೋಟೆ ಸುಂದರವಾಗಿದೆ. ಈ ಕೋಟೆಯನ್ನು ಸಂರಕ್ಷಣೆ ಮಾಡಬೇಕಿದೆ. ಪ್ರವಾಸಿ ತಾಣವಾಗಿ ಮಾರ್ಪಟ್ಟರೆ ಉತ್ತಮ.| ರಾಬರ್ಟ ಗಿಲ್, ವಿದೇಶಿ ಪ್ರವಾಸಿಗ