More

    ಭಾವೈಕ್ಯತೆಗೆ ಸಾಕ್ಷಿ ಮುದಗಲ್ ಮೋಹರಂ: ಎಸ್ಪಿ ನಿಖಿಲ್ ಹೇಳಿಕೆ ಸಿದ್ಧತೆ ಪರಿಶೀಲನೆ

    ಮುದಗಲ್: ಪಟ್ಟಣದಲ್ಲಿ ಆಚರಿಸುವ ಮೊಹರಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ ಎಸ್ಪಿ ಬಿ.ನಿಖಿಲ್ ಹೇಳಿದರು.


    ಸ್ಥಳೀಯ ಕಿಲ್ಲಾದಲ್ಲಿನ ಹಜರತ್ ಹುಸೇನ್ ಆಲಂ ದರ್ಗಾ, ದೇವರ ಬಾವಿಗೆ ಸೋಮವಾರ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮುದಗಲ್ನಲ್ಲಿ ಎಲ್ಲ ಸಮುದಾಯದವರು ಸೇರಿ ಮೊಹರಂ ಆಚರಿಸುವುದು ವಿಶೇಷವಾಗಿದೆ. ಮೊಹರಂ ಆಚರಣೆಗೆ ಯಾವುದೇ ತೊಂದರೆ ಆಗದಂತೆ ನಿಗಾ ವಹಿಸಲಾಗಿದೆ. ಅಬಕಾರಿ ಹಾಗೂ ಪೊಲೀಸ್ ಇಲಾಖೆಯಿಂದ ಜಂಟಿ ಕಾರ್ಯಾಚರಣೆ ಮೂಲಕ ಮದ್ಯದ ಅಕ್ರಮ ಮಾರಾಟಕ್ಕೆ ತಡೆಯೊಡ್ಡಲಾಗುವುದು ಎಂದು ತಿಳಿಸಿದರು.


    ದರ್ಗಾ ಸೇರಿ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಮೊಹರಂ ಆಚರಣೆಯಲ್ಲಿ ಲಕ್ಷಾಂತರ ಜನರು ಸೇರುವುದರಿಂದ ಭದ್ರತೆ 200 ಪೊಲೀಸ್ ಸಿಬ್ಬಂದಿ, 14 ಪಿಎಸ್‌ಐ, 5ಜನ ಎಎಸ್‌ಐ, ಒಂದು ಕೆಎಸ್‌ಆರ್‌ಪಿ, ಎರಡು ಡಿಎಆರ್ ಹಾಗೂ ಗೃಹರಕ್ಷಕ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ವಿವರಿಸಿದರು.

    ಇದನ್ನೂ ಓದಿ: ಶಾಂತಿ-ಸೌಹಾರ್ದದಿಂದ ಮೋಹರಂ ಆಚರಿಸಿ


    ಮೊಹರಂ ಸಂದರ್ಭದಲ್ಲಿ ಅಪರಾಧಗಳ ತಡೆಗೆ ವಿಶೇಷ ತಂಡ ನಿಯೋಜಿಸಲಾಗಿದೆ. ಕರ್ಕಶ ಶಬ್ದ ಮಾಡುವ ವಸ್ತುಗಳಿಂದ ನಾಗರಿಕರಿಗೆ ಕಿರಿಕಿರಿ ಆಗಲಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅಂತಹ ವಸ್ತುಗಳ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಜು.29ರಂದು ಮೊಹರಂ ಕೊನೆಯ ದಿನವಾಗಿದೆ ಎಂದು ಎಸ್ಪಿ ಬಿ.ನಿಖಿಲ್ ತಿಳಿಸಿದರು.


    ಆಲಂಗಳಿಗೆ ಮಜ್ಜನ

    ಮೊಹರಂ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಆಲಂಗಳನ್ನು ಸ್ಥಳಿಯ ಕಿಲ್ಲಾದಲ್ಲಿನ ದೇವರ ಬಾವಿಯಲ್ಲಿ (ದೂದ್‌ಬರ್) ಮಜ್ಜನ ಮಾಡಿಸಲಾಯಿತು. ಬಾಗಲಕೋಟೆ, ಕೊಪ್ಪಳ, ವಿಜಯಪುರ ಸೇರಿ ಅನೇಕ ಜಿಲ್ಲೆಗಳಿಂದ ಹೊತ್ತು ತರಲಾಗಿದ್ದ ಆಲಂಗಳನ್ನು ದೇವರ ಬಾವಿಯಲ್ಲಿ ಶುದ್ಧೀಕರಿಸಿಕೊಂಡು ಭಕ್ತರು ವಾಪಸ್ ತೆರಳಿದರು. ದರ್ಗಾ ಕಮಿಟಿಯವರು ಅನ್ನ ಸಂತರ್ಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts