More

    ಶಾಂತಿ-ಸೌಹಾರ್ದದಿಂದ ಮೋಹರಂ ಆಚರಿಸಿ

    ಗಂಗಾವತಿ: ಮೊಹರಂ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸಲು ಸಮುದಾಯದ ಮುಖಂಡರಿಗೆ ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ಸಲಹೆ ನೀಡಿದರು.

    ನಗರದ ತಾಪಂ ಆವರಣದ ಶ್ರೀಕೃಷ್ಣದೇವರಾಯ ಕಲಾಭವನದಲ್ಲಿ ಮೊಹರಂ ಹಬ್ಬದ ನಿಮಿತ್ತ ತಾಲೂಕು ಆಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಎಲ್ಲ ಸಮುದಾಯ ಒಗ್ಗೂಡಿ ಹಬ್ಬ ಆಚರಿಸಬೇಕಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.

    ಇದನ್ನೂ ಓದಿ: ಹಿಂದು-ಮುಸ್ಲಿಮರಿಂದ ಮಸೀದಿ ಉದ್ಘಾಟನೆ-ಭಾವೈಕ್ಯತೆಗೆ ಸಾಕ್ಷಿಯಾಯ್ತು ಕೊಟ್ಟೂರು

    ಹಿಂದು ಮತ್ತು ಮುಸ್ಲಿಂ ಭಾವೈಕ್ಯತೆ ಪ್ರತೀಕವಾದ ಮೊಹರಂ ಹಬ್ಬದಲ್ಲಿ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಹೀಗೇನಾದರೂ ಆದರೆ ಪೊಲೀಸ್ ಇಲಾಖೆ ಸಹಿಸಲ್ಲ. ಅಲಾಯಿ ದೇವರ ಪ್ರತಿಷ್ಠಾಪನೆ ಸ್ಥಳದಲ್ಲಿ ಪೊಲೀಸ್ ಮತ್ತು ಗೃಹರಕ್ಷಕ ಸಿಬ್ಬಂದಿ ನಿಯೋಜಿಸಲಾಗುವುದು. ಪ್ರತಿಷ್ಠಾಪನೆ ಸಮಿತಿಯವರು ಮುಂಜಾಗ್ರತೆಯೊಂದಿಗೆ ಹಬ್ಬ ಅಚರಿಸಬೇಕೆಂದು ತಿಳಿಸಿದರು.

    ಹಬ್ಬದ ದಿನ ಪ್ರಮುಖ ಪ್ರದೇಶಗಳಲ್ಲಿ ಸ್ವಚ್ಛತೆ, ನಿರಂತರ ವಿದ್ಯುತ್ ಪೂರೈಕೆ, ಪೊಲೀಸ್ ಬಂದೋಬಸ್ತ್ ಇತರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಸಮುದಾಯದ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.

    ತಹಸೀಲ್ದಾರ್ ಮಂಜುನಾಥ ಭೋಗಾವತಿ, ತಾಪಂ ಇಒ ಮಹಾಂತಗೌಡ ಪಾಟೀಲ್, ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಪಿಐಗಳಾದ ಅಡಿವೇಶ್ ಎನ್. ಗುದಿಗೊಪ್ಪ, ಎನ್.ಮಂಜುನಾಥ, ಜೆಸ್ಕಾಂ ಎಇಇ ಕೆ.ವೀರೇಶ, ಪಿಎಸೈಗಳಾದ ವೆಂಕಟೇಶ ಚವ್ಹಾಣ, ಕಾಮಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts