More

    ಹಿಂದು-ಮುಸ್ಲಿಮರಿಂದ ಮಸೀದಿ ಉದ್ಘಾಟನೆ-ಭಾವೈಕ್ಯತೆಗೆ ಸಾಕ್ಷಿಯಾಯ್ತು ಕೊಟ್ಟೂರು

    ಕೊಟ್ಟೂರು: ಪಟ್ಟಣದ ಕೆಳಗೇರಿಯಲ್ಲಿ ನಿರ್ಮಿಸಿರುವ ಮಸೀದಿಯನ್ನು ಮಸ್ಲಿಂ ಮತ್ತು ಹಿಂದುಗಳು ಜಂಟಿಯಾಗಿ ಗುರುವಾರ ಉದ್ಘಾಟಿಸುವ ಮೂಲಕ ಭಾವೈಕ್ಯತೆ ಮೆರೆದರು.

    ಬಡೀ ಮಸೀದ್ ಅಶೂರ್‌ಖಾನ್ ಸುನ್ನಿ ಕಮಿಟಿ ಮಸೀದಿ ನಿರ್ಮಾಣದ ಹೊಣೆ ಹೊತ್ತಿದ್ದು, ಇದಕ್ಕೆ ಮಾಜಿ ಶಾಸಕ ಭೀಮಾನಾಯ್ಕ 50 ಸಾವಿರ ರೂ. ಹಾಗೂ ಹಿಂದುಗಳೂ ದೇಣಿಗೆ ನೀಡಿದ್ದು, ಉಳಿದ ಮೊತ್ತವನ್ನು ಕಮಿಟಿ ಭರಿಸಿ ಒಟ್ಟು 8.5 ಲಕ್ಷ ರೂ. ವೆಚ್ಚದಲ್ಲಿ ಸುಂದರ ಸಮೀದಿ ನಿರ್ಮಿಸಿದೆ.

    ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ ಮಾತನಾಡಿ, ಕೊಟ್ಟೂರು ಶರಣರ ನಾಡು. ಸೌಹಾರ್ದದ ಬೀಡಾಗಿದ್ದು, ಇಲ್ಲಿ ಮುಸ್ಲಿಂ ಮತ್ತು ಹಿಂದುಗಳು ಸಹೋದರತ್ವದಲ್ಲಿ ಬದುಕುತ್ತಿದ್ದೇವೆ. ನಿಮ್ಮಲ್ಲಿ ಮತ್ತು ನಮ್ಮಲ್ಲಿಯೂ ಜಾತಿಯ ವಿಷ ಬೀಜಬಿತ್ತುವವರಿದ್ದಾರೆ.

    ಅಂತಹ ಸಮಾಜ ಘಾತುಕರ ಬಗ್ಗೆ ಎರಡು ಸಮುದಾಯವೂ ಎಚ್ಚರವಹಿಸಬೇಕು. ಅವರ ಮಾತುಗಳನ್ನು ಆಲಿಸದಿರುವುದು ಒಳಿತು ಎಂದರು.

    ಹಲವು ಊರುಗಳಲ್ಲಿ ಮುಸ್ಲಿಮರೇ ಇಲ್ಲ. ಆದರೂ ಆ ಊರುಗಳ ಹಿಂದುಗಳೇ ಮೋಹರಂ ಆಚರಿಸುತ್ತಿದ್ದಾರೆ. ಈ ರೀತಿ ಸೌದಾರ್ದತೆ, ಸಹಬಾಳ್ವೆ ಇರುವಾಗ, ಜಾತಿ ಬೀಜ ಬಿತ್ತುವವರನ್ನು ದೂರವಿಟ್ಟರೆ ಬದುಕು ಹಸನಾಗುತ್ತದೆ ಎಂದರು.

    ಇದಕ್ಕೂ ಮೊದಲು ಮುಸ್ಲಿಂ ಧರ್ಮಗುರುಗಳಾದ ಇಮ್ರಾನ್ ಆಫೀಸ್ ಸಾಹೇಬ್, ಸಾದಿಕ್ ಮೌಲನಾ, ಕುರಾನ್ ಮಂತ್ರಗಳನ್ನು ಪಠಿಸುವ ಮೂಲಕ ನೂತನ ಮಸೀದಿಗೆ ಚಾಲನೆ ನೀಡಿದರು.

    ಇದನ್ನೂ ಓದಿ: ಮಸೀದಿಯಲ್ಲಿ ಬಾಂಬ್: ಹುಸಿ ಕರೆ ಮಾಡಿದ್ದ ಆರೋಪಿ ಪೊಲೀಸರ ವಶಕ್ಕೆ, ಈತನಿಗಾಗಿ ಮೂರು ರಾಜ್ಯ ಸುತ್ತಿದ ಅಧಿಕಾರಿಗಳು​​

    ಪಪಂ ಸದಸ್ಯ ಕೆಂಗರಾಜ್, ವಾಲ್ಮೀಕಿ ಸಮಾಜದ ಮುಖಂಡರಾದ ಬೆಣ್ಣಿಹಳ್ಳಿ ಅಂಜಿನಪ್ಪ, ಪ್ರಕಾಶ, ಕೆಂಚಪ್ಪ, ದಲಿತ ಮುಖಂಡ ತಗ್ಗಿನಕೇರಿ ಕೊಟ್ರೇಶ, ಶಿವರಾಜ್, ಮುಸ್ಲಿಂ ಮುಖಂಡರಾದ ಎ. ಸತ್ತರ್ ಸಾಹೇಬ್, ಕೆ.ರಾಜಾವಲಿ, ಕೆ. ಅಬ್ದುಲ್ ಸಾಹೇಬ್, ಎಚ್. ನಬೀಉಲ್ಲಾ, ಕೆ. ಇಬ್ರಾಂ, ಬಿ. ಮಾಷು, ವಲಿಬಾಷಾ, ಜಿ. ಮಾಬು ಸಾಹೇಬ್, ಕೆ. ಹೊನ್ನೂರುವಲಿ ಇತರರಿದ್ದರು.

    ಮೋಹರಂ ಹಬ್ಬದ ವಿವರ

    ಇದೇ ಸಮಯದಲ್ಲಿ ಮಸೀದಿಯಿಂದ ಆಚರಿಸಲ್ಪಡುವ 6 ದಿನಗಳ ಮೊಹರಂ ಹಬ್ಬದ ಕಾರ್ಯಕ್ರಮ ಕುರಿತು ಸಭೆಯ ಗಮನಕ್ಕೆ ತಂದರು. ಜು.28ರ ಸಂಜೆ ಜನಪದ ರಸಮಂಜರಿ ಕಾರ್ಯಕ್ರಮ ಆಯೋಜಿಸಿದ್ದು ಮೊದಲು ಜನನಿ ಪುಷ್ಪಕಲಾ ತಂಡ ಹ್ಯಾರಡದ ಪಿ. ಚಮನ್ ಸಾಹೇಬ್, ಪಟ್ಟೇದ್ ಹನುಮಂತಪ್ಪ, ಎಸ್. ನಾಗರಾಜ್, ಬಿ. ನಾಗರಾಜ್ ಪ್ರದರ್ಶನ ನೀಡುವರು.

    ಎರಡನೇ ಹಂತದಲ್ಲಿ ಸಂತ ಶಿಶುನಾಳ ಶರೀಫ್ ಸಾಂಸ್ಕೃತಿ ಕಲಾ ತಂಡ ಹರಪನಹಳ್ಳಿಯ ಮುಸ್ತಾಫಾ ಕಾನಳ್ಳಿ ಕೆ. ಅಲ್ಲಾಭಕ್ಷಿ, ಶಬ್ಬೀರ್ ಸಾಬ್, ಮೂರನೇ ತಂಡದ ಇಮ್ಾ ಸಾಹೇಬ್ ಕನಕಬಸಾಪುರ, ಇ.ನಾಜೀಮ್ ಮತ್ತು ಸೈಫುದ್ದೀನ್ ಮುಂತಾದವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts