ಜಿಲ್ಲೆ

ಪಂಜದಲ್ಲಿ ಕೆಸರು ಗದ್ದೆ ಕ್ರೀಡಾಕೂಟ

ಸೌಮ್ಯ ಆರ್

ಸುಬ್ರಹ್ಮಣ್ಯ: ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ ಮತ್ತು ಕೆಸರು ಗದ್ದೆ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.

ವಲಯ ಉಪಾಧ್ಯಕ್ಷ ಅಭಿಷೇಕ್ ಜಿ.ಎಂ. ಸಪ್ತಾಹ ಉದ್ಘಾಟಿಸಿದರು. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಮುಖ್ಯ ಅತಿಥಿಗಳಾಗಿ ಮಾತನಾಡಿ, ದೇವಳಕ್ಕೆ ಗದ್ದೆ ಹಸ್ತಾಂತರ ಆದ ಬಳಿಕವೂ ಜೇಸಿಸ್ ವತಿಯಿಂದ ನೇಜಿ ನೆಡುವುದು, ಅದರ ಆರೈಕೆ ಮಾಡುವುದು ಮತ್ತು ಕಟಾವನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತಿರುವುದು ಆದರ್ಶಪ್ರಾಯ ಎಂದರು.

ಪಂಜ ಜೇಸಿಸ್ ಅಧ್ಯಕ್ಷ ಜೀವನ್ ಮಲ್ಕಜೆ ಅಧ್ಯಕ್ಷತೆ ವಹಿಸಿದ್ದರು. ಜೇಸಿಸ್ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ನಿಕಟಪೂರ್ವಾಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ, ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ, ಸಪ್ತಾಹ ನಿರ್ದೇಶಕ ವಾಚಣ್ಣ ಕೆರೆಮೂಲೆ ಉಪಸ್ಥಿತರಿದ್ದರು.

ಜಯರಾಮ ಕಲ್ಲಾಜೆ ನಿರ್ವಹಿಸಿದರು. ಪವನ್ ಮೂಲೆಮನೆ ಜೇಸಿ ವಾಣಿ ನುಡಿದರು. ಜೀವನ್ ಮಲ್ಕಜೆ ಸ್ವಾಗತಿಸಿದರು. ವಿಜೇಶ್ ಹಿರಿಯಡ್ಕ ಅತಿಥಿ ಪರಿಚಯಿಸಿದರು. ಜೀವನ್ ಶೆಟ್ಟಿಗದ್ದೆ ವಂದಿಸಿದರು. ಬಳಿಕ ಕೆಸರು ಗದ್ದೆ ಕ್ರೀಡಾಕೂಟ, ಏರ್‌ಗನ್ ಶೂಟಿಂಗ್ ಸ್ಪರ್ಧೆ ನಡೆಯಿತು.