ಚಕ್ರೇಶ್ವರಿ ಯುವಕ ಮಂಡಲ ಹಾಗೂ ಬಿಲ್ಲವ ಸಮಾಜ ಸೇವಾ ಸಂಘ ಆಶ್ರಯದಲ್ಲಿ ಮುದ್ದು ರಾಧೆ ಮುದ್ದು ಕೃಷ್ಣ ಸ್ಪರ್ಧೆ ಕೋಡಿ ಸಭಾಭವನದಲ್ಲಿ ನಡೆಯಿತು 
ಜಿಲ್ಲೆ

ಕೋಡಿಯಲ್ಲಿ ಮುದ್ದುಕೃಷ್ಣ ಸ್ಪರ್ಧೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಕೋಡಿ ಚಕ್ರೇಶ್ವರಿ ಯುವಕ ಮಂಡಲ ಹಾಗೂ ಬಿಲ್ಲವ ಸಮಾಜ ಸೇವಾ ಸಂಘ ಆಶ್ರಯದಲ್ಲಿ ಮುದ್ದು ರಾಧೆ ಮುದ್ದು ಕೃಷ್ಣ ಸ್ಪರ್ಧೆ ಕೋಡಿ ಸಭಾಭವನದಲ್ಲಿ ಭಾನುವಾರ ನಡೆಯಿತು.

ಮೂರು ವರ್ಷದ ಒಳಗಿನ ವಿಭಾಗದಲ್ಲಿ ಹಂಸಿನಿ, ದೈವಿಕ್ ಸೇರೇಗಾರ್, ಆರ್ನ ಬಿ. ನಾಯಕ್, 3ರಿಂದ 6 ವರ್ಷದ ವಿಭಾಗದಲ್ಲಿ ಶ್ರೇಯಾ, ಧ್ವನಿ ಕಿರಣ್, ಅಹನಾ ಸಿ.ಪಿ, 6ರಿಂದ 9ವರ್ಷದ ವಿಭಾಗದಲ್ಲಿ ನಿಸರ್ವಿ, ಶ್ರಾವಣ್ಯ ಎಸ್. ಪೂಜಾರಿ, ಆರಾಧ್ಯಾ ಕೋಡಿ ಬಹುಮಾನ ಪಡೆದರು.

ಚಕ್ರೇಶ್ವರಿ ದೇವಸ್ಥಾನದ ಪಾತ್ರಿಗಳಾದ ರಾಘವೇಂದ್ರ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಕುಂದಾಪುರ ಬಿಲ್ಲವ ಸಮಾಜದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಸಮಾರೋಪದ ಅಧ್ಯಕ್ಷತೆ ವಹಿಸಿದ್ದರು.

ಕೋಡಿ ಗಂಗಾಧರ್ ಪೂಜಾರಿ, ಜಯಪ್ರಕಾಶ್ ಪೂಜಾರಿ, ಅಶೋಕ್ ಜಿ.ಪೂಜಾರಿ, ಗೋಪಾಲ್ ಪೂಜಾರಿ, ಸಂಜೀವ್ ಆರ್. ಪೂಜಾರಿ, ನಾಗರಾಜ್ ಕಾಂಚನ್, ಗೋವಿಂದ ಕಾಂಚನ್, ತಿಮ್ಮಪ್ಪ ಖಾರ್ವಿ, ನಾರಾಯಣ ಖಾರ್ವಿ, ಸುರೇಖಾ ಮಧುಕರ್ ಪೂಜಾರಿ, ಕಮಲಾ ಮಂಜುನಾಥ್, ರವಿಕಲಾ ಗಣೇಶ್ ಶೇರೆಗಾರ್ ಉಪಸ್ಥಿತರಿದ್ದರು. ಓಕುಡ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿಯರಾದ ಮಲ್ಲಿಕಾ ಶೇರೇಗಾರ್, ವಿಜೇತಾ ಪೂಜಾರಿ, ಶ್ವೇತಾ ನಾಯಕ್ ತೀರ್ಪುಗಾರರಾಗಿ ಸಹಕರಿಸಿದರು. ಕೋಡಿ ಯೋಗೀಶ್ ಪೂಜಾರಿ ಸ್ವಾಗತಿಸಿದರು. ಕೋಡಿ ಆನಂದ್ ಕಾರ್ಯಕ್ರಮ ನಿರೂಪಿಸಿದರು.