ಜಿಲ್ಲೆ

ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಶಿಷ್ಯರ ಶ್ರೇಯೋಭಿವೃದ್ಧಿಗಾಗಿ ಅದ್ಭುತ ಕಾರ್ಯ

Uttara Kannada - Subash Hegde

ಭಟ್ಕಳ: ಗುರುಗಳು ಧೀಕ್ಷೆ ಪಡೆದ ಬಳಿಕ ಶಿಷ್ಯರ ಶ್ರೇಯೋಭಿವೃದ್ಧಿಗಾಗಿ , ನಮ್ಮ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ಮತ್ತು ಅದರ ಪ್ರಚಾರ ಕಾರ್ಯದಲ್ಲಿ ಒಂದು ಅದ್ಭುತ ಶಕ್ತಿಯಾಗಿ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಚಾತುರ್ಮಾಸ್ಯ ವೃತ ಪ್ರಾರಂಭಿಸಿರುವದು. ಶಿಷ್ಯರಿಗೆ ಭಕ್ತ ವರ್ಗಕ್ಕೆ ಹಾಗೂ ನಾಡಿನ ಜನ ಸಮೂಹಕ್ಕೆ ಪುಣ್ಯದ ಕೆಲಸವಾಗಿದೆ. ಜನರನ್ನು ಸಂಘಟಿಸುವಂತಹ, ಜನರಲ್ಲಿ ಧಾರ್ಮಿಕ ,ಆಧ್ಯಾತ್ಮಿಕ ಭಾವನೆಯನ್ನು ಜಾಗ್ರತಿಗೊಳಿಸುವ ಅವರೆಲ್ಲ ಪ್ರಯತ್ನದ ಫಲ ಇಂದು ಸಮಾಜ ಒಳ್ಳೆಯದಾಗಿ ಬೆಳೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಜನರಲ್ಲಿ ನಮ್ಮ ಹಿಂದೂ ಧರ್ಮವನ್ನು ಸದಾ ಜಾಗ್ರತವಾಗಿರುವುದಕ್ಕೆ ಪೂಜ್ಯ ಸ್ವಾಮೀಜಿಯವರ ಮಾಡುವಂತಹ ಎಲ್ಲಾ ಕೆಲಸದರ ಜೊತೆಗೆ ನಾವೆಲ್ಲರೂ ಇದ್ದೇವೆ. ಮತ್ತು ನಾವೆಲ್ಲರೂ ಜೊತೆ ಸೇರಿ ಸನಾತನ ಹಿಂದೂ ಧರ್ಮದ ರಕ್ಷಣೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಶ್ರೀ ರಾಮ ಹಾಗೂ ಸ್ವಾಮೀಜಿ ಆಶೀರ್ವಾದ ಮಾಡಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ, ಭಟ್ಕಳ ಮಾಜಿ ಶಾಸಕ ಸುನೀಲ ನಾಯ್ಕ, ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವೆಂಕಟೇಶ ನಾಯಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಭಟ್ಕಳ ತಾಲೂಕಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.