ಜಿಲ್ಲೆ

ಟಿಪ್ಪು ಸುಲ್ತಾನ್ ಕಾದಂಬರಿ ಬಿಡುಗಡೆ ಮಾಡಿದ ಸಂಸದ ತೇಜಸ್ವಿ ಸೂರ್ಯ

ಪ್ರಶಾಂತ ರಿಪ್ಪನ್​ಪೇಟೆ

ಬೆಂಗಳೂರು: 60 ವರ್ಷದ ಇತಿಹಾಸವುಳ್ಳ ವಕ್ಫ್ ಬೋರ್ಡ್, 1000 ವರ್ಷದ ಇತಿಹಾಸವುಳ್ಳ ನಮ್ಮ ದೇವಲಾಯ, ಕಲ್ಯಾಣಿ, ಪುಷ್ಕರಣಿಗಳನ್ನು ತನ್ನ ವಶಕ್ಕೆ ಪಡೆಯಲು ಹುನ್ನಾರ ನಡೆಸಿರುವುದು ಇತಿಹಾಸದ ೋರ ದುರಂತಕ್ಕೆ ಸಾಕ್ಷಿ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಖಾಸಗಿ ಹೋಟೆಲ್‌ನಲ್ಲಿ ಪ್ರಭಾ ಕೇತಾನ್ ೌಂಡೇಶನ್ ಆಯೋಜಿಸಿದ್ದ ಡಾ.ವಿಕ್ರಮ್ ಸಂಪತ್ ಅವರ ಟಿಪ್ಪು ಸುಲ್ತಾನ್ ಐತಿಹಾಸಿಕ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು.

ದೇಶದ ಭವಿಷ್ಯಕ್ಕೆ ಇತಿಹಾಸ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಇತಿಹಾಸಕಾರರು, ಸಮಾಜ ವಿಜ್ಞಾನದ ಬರಹಗಾರರ ಕೊಡುಗೆ ಅಮೂಲ್ಯವಾಗಿದೆ. ಸಂಸ್ಕೃತಿ, ಪರಂಪರೆ, ಇತಿಹಾಸದ ಸತ್ಯವನ್ನು ಕತೆ, ಕಾದಂಬರಿಗಳ ಮೂಲಕ ಮುಂದಿನ ಪೀಳಿಗೆಗೆ ಕೊಡುವ ಕೆಲಸ ಅಗತ್ಯವಾಗಿದೆ. ಅಂತಹ ಜವಾಬ್ದಾರಿಯುತ ಕೆಲಸವನ್ನು ವಿಕ್ರಮ ಸಂಪತ್ ಕಳೆದ ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದು, ಅದರ ಭಾಗವಾಗಿ ಸುಮಾರು ಸಾವಿರ ಪುಟದ ಟಿಪ್ಪು ಸುಲ್ತಾನ್ ಕಾದಂಬರಿ ಇಂದು ಪ್ರಕಟವಾಗಿದೆ.

ಟಿಪ್ಪು ಸುಲ್ತಾನ್ ಇತಿಹಾಸ ನಮಗೆ ಯಾಕೆ ಬೇಕು ಎಂಬ ಪ್ರಶ್ನೆ ಸಹಜವಾಗಿ ಮೂಡಬಹುದು. ಔರಂಗಜೇಬ್ ಮರಣಹೊಂದಿ 400 ವರ್ಷವಾದರೂ ಈಗಲೂ ರೈತರ ಜಮೀನು ವಶಪಡಿಸಿಕೊಳ್ಳುತ್ತಿದ್ದಾನೆಂದು ಹೈದ್ರಾಬಾದ್ ರೈತರು ಸಂಸತ್ತಿನ ಜಂಟಿ ಸಮಿತಿ (ಜೆಪಿಸಿ) ಮುಂದೆ ದೂರು ನೀಡಿದರು.

ಕರ್ನಾಟಕದಲ್ಲಿ ನಡೆಯುತ್ತಿರುವ ವಕ್ಫ್ ವಿವಾದಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ ಜೆಪಿಸಿ ಮುಂದೆ ಹಾವೇರಿಯ ರೈತರೊಬ್ಬರು ತಮ್ಮ ಮಗ ತಮ್ಮ ಜಮೀನಿನಲ್ಲಿ ವಕ್ಫ್ ಹೆಸರು ಉಲ್ಲೇಖಗೊಂಡಿದ್ದರಿಂದ ಸಾಲ, ಸಹಾಯಧನಗಳ ಸೌಲಭ್ಯದಿಂದ ವಂಚಿರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ದೂರು ನೀಡಿದ್ದಾರೆ. ಆದರೆ ಸರ್ಕಾರ ಮಾತ್ರ ಪೋಷಕರು ಹೇಳಿಕೆಯನ್ನು ಮರೆಮಾಚಿ ಪ್ರತ್ಯೇಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಎ್ಐಆರ್‌ನಲ್ಲಿ ನಮೂದಿಸಿದೆ. ಇಂತಹ ಸಮಾಜ ವಿರೋಧಿ ಬೆಳವಣಿಗೆಗಳ ಬಗ್ಗೆ, ಇತಿಹಾಸದಲ್ಲಿ ನಡೆದಿರುವ ಅನ್ಯಾಯಗಳ ಬಗ್ಗೆ ಹೊಸ ಪೀಳಿಗೆಗೆ ತಿಳಿಸುವುದಕ್ಕೆ ಐತಿಹಾಸಿಕ ಕಾದಂಬರಿಗಳು ಅವಶ್ಯಕವೆಂದು ತೇಜಸ್ವಿ ಸೂರ್ಯ ಪ್ರತಿಪಾದಿಸಿದರು.

ಸಮಾರಂಭದಲ್ಲಿ ನೃತ್ಯನಿರ್ದೇಶಕಿ ಮಧು ನಟರಾಜ್, ಲೇಖಕ ಡಾ.ವಿಕ್ರಮ್ ಸಂಪತ್, ಓಲಾ ಸಂಸ್ಥೆ ಮುಖ್ಯಸ್ಥ ಭಾವೀಶ್ ಅಗರವಾಲ್ ಮತ್ತಿತರರಿದ್ದರು.

"ಈ ಹಿಂದೆ ಉರಿಗೌಡ, ನಂಜೇಗೌಡ ಹೆಸರನ್ನು ಸೃಷ್ಟಿಮಾಡಿದ್ದರಿಂದ ಬಿಜೆಪಿಗೆ ಸ್ವಲ್ಪ ಮತಗಳು ಬಂದಿರಬಹುದು; ಆದರೆ ಇತಿಹಾಸದಲ್ಲಿ ಅವರ ಹೆಸರಿಲ್ಲ. ಟಿಪ್ಪು ಸುಲ್ತಾನ್ ಧಾರವಾಹಿ ನನ್ನ ಆಸಕ್ತಿ ಕೆರಳಿಸಿತ್ತು. ಸರ್ಕಾರ ಟಿಪ್ಪು ಜಯಂತಿ ಮಾಡಲು ಮುಂದಾದಾಗ ರಾಜ್ಯಾದ್ಯಂತ ಗಲಭೆಗಳಾಗಿ, ಕೊಡಗಿನಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಈ ಎಲ್ಲ ಘಟನೆಗಳು ಕಾದಂಬರಿಗೆ ಪ್ರೇರಣೆ"  ಎಂದು ಲೇಖಕ ಡಾ.ವಿಕ್ರಮ ಸಂಪತ್ ಹೇಳಿದರು.