ಜಿಲ್ಲೆ

ನಂಬರ್ ಪ್ಲೇಟ್ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಓಡಾಡ್ತಿದ್ದವ ಪೊಲೀಸ್ ಬಲೆಗೇ ಬಿದ್ದ!

manjunathktgns

ಬೆಂಗಳೂರು: ಬೈಕ್ ನಂಬರ್ ಪ್ಲೇಟ್​ನಲ್ಲಿ ಪೊಲೀಸ್ ಎಂದು ಬರೆದುಕೊಂಡು ನಗರದಲ್ಲಿ ಸುತ್ತಾಡುತ್ತಿದ್ದ ಯುವಕನೊಬ್ಬ ಕೆಆರ್​ಪುರ ಸಂಚಾರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಆಂಧ್ರಪ್ರದೇಶ ಚಿತ್ತೂರು ಮೂಲದ ಕುಮಾರ್ (23) ಬಂಧಿತ ಆರೋಪಿ. ಕೆಲ ದಿನಗಳ ಹಿಂದೆ ಕುಮಾರ್ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ಬೈಕ್​ನ ನಂಬರ್ ಪ್ಲೇಟ್​ನಲ್ಲಿ ಪೊಲೀಸ್ ಎಂದು ಬರೆಸಿಕೊಂಡು ತಿರುಗಾಡುತ್ತಿದ್ದ.

ಭಾನುವಾರ ಬೆಳಗ್ಗೆ ಈತ ತಿರುಗಾಡುತ್ತಿರುವುದನ್ನು ಗಮನಿಸಿದ ಕೆಆರ್​ಪುರ ಸಂಚಾರ ಪೊಲೀಸರು ತಡೆದು ನಿಲ್ಲಿಸಿ ದಾಖಲೆ ಕೇಳಿದಾಗ ಸತ್ಯ ಸಂಗತಿ ಬೆಳಕಿಗೆ ಬಂದಿದೆ. ಪೊಲೀಸರು 2 ಸಾವಿರ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.