ಕಂಪ್ಲಿ ತಾಲೂಕಿನ ಇಟಗಿ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್‌ಎನ್‌ಪೇಟೆ ಕ್ಲಸ್ಟರ್‌ಮಟ್ಟದ ಕಲಿಕಾ ಹಬ್ಬಕ್ಕೆ ಗ್ರಾಪಂ ಅಧ್ಯಕ್ಷ ವೈ.ರಮಣಯ್ಯ ಚಾಲನೆ ನೀಡಿದರು. ಇಸಿಒ ಎಂ.ರೇವಣ್ಣ, ಸಿಆರ್‌ಪಿಗಳಾದ ರೇಣುಕಾರಾಧ್ಯ, ಚಂದ್ರಯ್ಯ ಸೊಪ್ಪಿಮಠ, ಶಿಕ್ಷಕ ಪ್ರತಿನಿಧಿ ಎಂ.ಎ.ನಾಗನಗೌಡ ಇತರರಿದ್ದರು.. 
ಜಿಲ್ಲೆ

ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಪ್ರೇರಣೆ

ಗಾಯತ್ರಿ ಮಾಲಿಪಾಟೀಲ್

ಕಂಪ್ಲಿ: ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಕಲಿಕಾ ಹಬ್ಬ ಪೂರಕವಾಗಿದೆ ಎಂದು ಸಿಆರ್‌ಪಿ ರೇಣುಕಾರಾಧ್ಯ ಹೇಳಿದರು.

ತಾಲೂಕಿನ ಇಟಗಿ ಸಹಿಪ್ರಾ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್‌ಎನ್ ಪೇಟೆ ಕ್ಲಸ್ಟರ್‌ಮಟ್ಟದ ಎಫ್‌ಎಲ್‌ಎನ್(ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ) ಬಲವರ್ಧನೆಯ ಕಲಿಕಾ ಹಬ್ಬದಲ್ಲಿ ಮಾತನಾಡಿದರು. ಕಲಿಕಾ ಹಬ್ಬ ಮಕ್ಕಳು ಮತ್ತು ಪಾಲಕರ ಸಂಬಂಧ ಗಟ್ಟಿಗೊಳಿಸುತ್ತದೆ. ಮಕ್ಕಳು ಪಾಲಕರ ಜತೆ ಕಥೆ ಕಟ್ಟುವುದು, ಗಟ್ಟಿ ಓದು, ಸ್ಮರಣ ಶಕ್ತಿ, ಮೋಜು ಗಣಿತ, ಸುಂದರ ಕೈಬರಹ, ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯವನ್ನು ಪ್ರೇರೇಪಿಸಲಾಗುತ್ತದೆ ಎಂದರು.

ಗ್ರಾಪಂ ಅಧ್ಯಕ್ಷ ವೈ.ರಮಣಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಎಂ.ತೋಟಪ್ಪ, ಇಸಿಒ ಎಂ.ರೇವಣ್ಣ, ಸಿಆರ್‌ಪಿ ಚಂದ್ರಯ್ಯ ಸೊಪ್ಪಿಮಠ, ಶಿಕ್ಷಕ ಪ್ರತಿನಿಧಿಗಳಾದ ಎಂ.ಎ.ನಾಗನಗೌಡ, ಸುನಿತಾ ಪೂಜಾರಿ, ರಾಜೇಶ್ವರಿ, ಪ್ರಮುಖರಾದ ದಾದಾ ಖಲಂದರ್, ಪಂಪನಗೌಡ್ರು, ಕೆ.ಮಾಬುಸುಬಾನಿ ಇತರರಿದ್ದರು.