ಜಿಲ್ಲೆ

ಪತಿಯ ಮೇಲಿನ ಸಿಟ್ಟು-ಮಗನನ್ನು ಮೊಸಳೆಗಳಿಗೆ ಎಸೆದ ತಾಯಿ!!

Uttara Kannada - Subash Hegde

ದಾಂಡೇಲಿ: ಪತಿಯ ಮೇಲಿನ ಸಿಟ್ಟಿಗೆ ತನ್ನ ಮಗನನ್ನೇ ತಾಯಿ ಮೊಸಳೆಗಳಿರುವ ನಾಲೆಗೆ ಎಸೆದ ಹೃದಯ ವಿದ್ರಾವಕ ಘಟನೆ ಶನಿವಾರ ದಾಂಡೇಲಿಯಲ್ಲಿ ನಡೆದಿದೆ.
ನಗರದ ಹಾಲಮಡ್ಡಿಯ ಬಾಡಿಗೆ ಮನೆಯಲ್ಲಿ ವಾಸವಿರುವ ಸಾವಿತ್ರಿ ಎಂಬ ಮಹಿಳೆ ತನ್ನ ಪತಿಯ ಜತೆ ಜಗಳವಾಡಿ, ಆ ಸಿಟ್ಟಿನಲ್ಲಿ ತನ್ನ 6 ವರ್ಷದ ಮಗ ವಿನೋದ್ ನನ್ನು ಮೊಸಳೆಗಳಿರುವ ಮನೆಯ ಪಕ್ಕದ ನಾಲೆಗೆ ಎಸೆದಿದ್ದಳು.
ಕೆಲ ಹೊತ್ತಿನಲ್ಲಿ ಆಕೆಗೆ ತಾನು ಮಾಡಿದ ತಪ್ಪಿನ‌ ಅರಿವಾಗಿದ್ದು, ಮನೆಯವರಿಗೆ ತಿಳಿಸಿದ್ದಾಳೆ. ಸ್ಥಳೀಯರು, ಪೊಲೀಸರು ರಾತ್ರಿಯಿಡೀ ಹುಡುಗನಿಗಿಗಾಗಿ ಹುಡುಕಾಟ ನಡೆಸಿದ್ದರು.‌

ಆದರೆ, ಕಾಲ‌ ಮಿಂಚಿತ್ತು. ಆಗಲೇ ಹುಡುಗ ವಿನೋದ ಮೃತಪಟ್ಟಿದ್ದ. ಭಾನುವಾರ ಬಾಲಕನ ಶವ ಪತ್ತೆಯಾಗಿದೆ.