ಜಿಲ್ಲೆ

ಒಡವೆ ಕದ್ದ ಮಗನ ವಿರುದ್ಧ ತಾಯಿ ದೂರು

ಪಡುಬಿದ್ರಿ: ಬಡಾ ಗ್ರಾಮದ ಮಹಿಳೆಯೊಬ್ಬರ ಮನೆಯಿಂದ ಚಿನ್ನಾಭರಣ ಸಹಿತ ದಾಖಲಾತಿಗಳು ಕಳವಾಗಿದ್ದು, ಈ ಕುರಿತು ಅವರು ಪುತ್ರನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸುಗಂಧಿ ದೂರು ನೀಡಿದವರು. ಅವರ ಪುತ್ರ ಅವಿನಾಶ್ ಕೆಲವು ತಿಂಗಳ ಹಿಂದೆ ಸಾಲ ತೀರಿಸುವುದಕ್ಕಾಗಿ ತಾಯಿಯ ಒಡವೆಗಳನ್ನು ಕೇಳಿ ಪಡೆದಿದ್ದು, ಬಳಿಕ ಹಿಂದಿರುಗಿಸದೆ ತಾಯಿಗೆ ಮೋಸ ಮಾಡಿದ್ದಾನೆ. ಅದೇ ರೀತಿ ಅ.20ರಂದು ಮನೆಗೆ ಮಗ ಬಂದಿದ್ದು, ತನ್ನ ಕಪಾಟಿನೊಳಗಿದ್ದ ಬ್ಯಾಗ್‌ನಿಂದ ಆಭರಣ ಹಾಗೂ ದಾಖಲೆಗಳನ್ನು ಕಳವು ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.