ಜಿಲ್ಲೆ

ಆರೋಗ್ಯ ಇಲಾಖೆಗೇ ಅನಾರೋಗ್ಯ !

ಲಕ್ಷ್ಮೀಕಾಂತ್ ಕುಲಕರ್ಣಿ

ಯಾದಗಿರಿ: ಗಿರಿ ಜಿಲ್ಲೆ ಜನರ ಪಾಲಿಗೆ ಸಂಜೀವಿನಿ ಆಗಬೇಕಿದ್ದ ಸಕರ್ಾರಿ ಆಸ್ಪತ್ರೆಗಳು ವೈದ್ಯರಿಲ್ಲದೆ ಭಣಗುಡುತ್ತಿದ್ದು, ಸಣ್ಣಪುಟ್ಟ ಚಿಕಿತ್ಸೆಗಳಿಗೂ ಜನತೆ ಪಕ್ಕದ ಜಿಲ್ಲೆಗಳತ್ತ ಮುಖ ಮಾಡುವಂತಾಗಿದೆ.

ಜಿಲ್ಲೆಯಲ್ಲಿ ಐದಾರು ತಿಂಗಳಿನಿಂದ ಹೆಮ್ಮಾರಿ ಕರೊನಾ ಜನರ ಜೀವ ಹಿಂಡುತ್ತಿದೆ. ಆದರೆ ಗ್ರಾಮೀಣ ಭಾಗದ ಸಕರ್ಾರಿ ಆಸ್ಪತ್ರೆಗಳಲ್ಲಿ ವೈದ್ಯರ ಹುದ್ದೆ ಖಾಲಿ ಇರುವುದರಿಂದ ಸಕಾಲಕ್ಕೆ ಚಿಕಿತ್ಸೆ ಸಿಗದೆ ಜನತೆ ನಿತ್ಯ ಪರದಾಡಬೇಕಾಗಿದೆ. ಆರೋಗ್ಯ ಇಲಾಖೆಯಿಂದ ಪ್ರತಿ ತಿಂಗಳು ತಜ್ಞ ವೈದ್ಯರು ಬೇಕಾಗಿದ್ದಾರೆ. ಲಕ್ಷಗಟ್ಟಲೇ ವೇತನ ಕೊಡುತ್ತೇವೆ ಎಂದು ಪ್ರಕಟಣೆ ಹೊರಡಿಸಿದರೂ ವೈದ್ಯರ ಹುದ್ದೆಗಳು ಭತರ್ಿ ಆಗದಿರುವುದು ದುರಂತವೇ ಸರಿ.

ಜಿಲ್ಲೆಯಲ್ಲಿ 44 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 6 ಸಮುದಾಯ ಆಸ್ಪತ್ರೆ, 2 ತಾಲೂಕು ಹಾಗು 250 ಹಾಸಿಗೆಯ ಒಂದು ಜಿಲ್ಲಾಸ್ಪತ್ರೆ ಇದ್ದು, ಈ ಎಲ್ಲ ಕಡೆ ಮಂಜೂರಾದ ವೈದ್ಯರು ಮತ್ತು ವೈದ್ಯಕಿಯೇತರ ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮೇಲಧಿಕಾರಿಗಳಿಗೆ ಆಗಾಗ್ಗೆ ವರದಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಕಾರಣ ಜನತೆ ಅನಿವಾರ್ಯವಾಗಿ ಬೇರೆ ಜಿಲ್ಲೆ ಆಸ್ಪತ್ರೆಗಳ ಮೇಲೆ ಅವಲಂಬಿಸುವುದು ಅನಿವಾರ್ಯ ಎನಿಸಿದೆ.

ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ 40 ತಜ್ಞ ವೈದ್ಯರ ಹುದ್ದೆ ಮಂಜೂರಾಗಿದ್ದು, ಇದರಲ್ಲಿ 17 ಮಾತ್ರ ಭತರ್ಿಯಾಗಿವೆ. 9 ದಂತ ವೈದ್ಯರ ಪೈಕಿ 8 ಜನ ಕಾರ್ಯನಿರ್ವಹಿಸುತ್ತಿದ್ದು, ಒಂದು ಖಾಲಿ ಇದೆ. ಜಿಲ್ಲೆ 6 ತಾಲೂಕು ವೈದ್ಯಾಧಕಾರಿಗಳ ಪೈಕಿ 3 ಕಡೆ ಹುದ್ದೆ ಖಾಲಿ ಉಳಿದಿವೆ. 58 ಕಿರಿಯ ಫಾರ್ಮಾಸಿಸ್ಟ್ ಹುದ್ದೆಗಳ ಪೈಕಿ 40 ಭರ್ತಿಯಾಗಿದ್ದು, 18 ಖಾಲಿ ಇವೆ. ಇನ್ನು ಮಂಜೂರಾದ 53 ಪ್ರಥಮ ದಜರ್ೆ ಸಹಾಯಕ ಹುದ್ದೆ ಪೈಕಿ 14 ಭತರ್ಿಯಾಗಿದ್ದು, 39 ಖಾಲಿ ಉಳಿದಿವೆ. 262 ಡಿ ದರ್ಜೆ ನೌಕರರ ಪೈಕಿ 42 ಹುದ್ದೆ ಖಾಲಿ ಇವೆ.

ಆರೋಗ್ಯ ಇಲಾಖೆಯಲ್ಲಿ ವೈದ್ಯರೂ ಸೇರಿ ವೈದ್ಯಕಿಯೇತರ ಹುದ್ದೆಗಳು ಭರ್ತಿ ಆಗದ್ದರಿಂದ ನಿರ್ದಿಷ್ಟ ಯೋಜನೆಗಳು ಸಕಾಲಕ್ಕೆ ಜನತೆಗೆ ತಲುಪುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇನ್ನಾದರೂ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದು ಜರೂರಿ ಎನಿಸಿದೆ.

ಕೋವಿಡ್-19ಗಾಗಿ ತಾತ್ಕಾಲಿಕ ಭರ್ತಿ

ಜಿಲ್ಲೆಯಲ್ಲಿ ರುದ್ರನರ್ತನ ನಡೆಸುತ್ತಿರುವ ಕರೊನಾ ವೈರಸ್ ಮಟ್ಟ ಹಾಕುವ ನಿಟ್ಟಿನಲ್ಲಿ ಸಕರ್ಾರ ಇದೀಗ ವಿಶೇಷ ವೈದ್ಯರ ತಾತ್ಕಾಲಿಕ ನೇಮಕಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಕಾರಣ 10 ತಜ್ಞ ವೈದ್ಯರು, 11 ಲ್ಯಾಬ್ ತಂತ್ರಜ್ಞರು, 16 ಫಾರ್ಮಾಸಿಸ್ಟ್, 15 ರ‍್ಯಾಪಿಡ್ ಮೊಬೈಲ್ ಟಿಕ್ನಿಷಿಯನ್ ಹಾಗೂ 22 ಗ್ರೂಪ್ ಡಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.