ಸುಳ್ಯ: ವಿಶ್ವ ಹಿಂದು ಪರಿಷದ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಆಶ್ರಯದಲ್ಲಿ ಬುಧವಾರ 11ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ ನಡೆಯಿತು. ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಚಾಲನೆ ನೀಡಿದರು.
ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಶೋಭಾಯಾತ್ರೆ ಹೊರಟು ಅಂಬಟೆಡ್ಕದಿಂದ ಕೆ.ವಿ.ಜಿ ವೃತ್ತವಾಗಿ ಮುಂದಕ್ಕೆ ಸಾಗಿ, ವಿವೇಕಾನಂದ ಸರ್ಕಲ್ ಮೂಲಕ ಜೂನಿಯರ್ ಕಾಲೇಜ್ ರಸ್ತೆಯಿಂದಾಗಿ ಮತ್ತೆ ಚೆನ್ನಕೇಶವ ದೇವಸ್ಥಾನದ ಎದುರು ಸಮಾಪನಗೊಂಡಿತು. ವಿಶೇಷ ಆಕರ್ಷಣೆಯಾಗಿ ದೇವಸ್ಥಾನದ ಬಳಿ ಅಟ್ಟಿ ಮಡಕೆ ಒಡೆಯಲಾಯಿತು.
ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ, ವಿಶ್ವ ಹಿಂದು ಪರಿಷದ್ ಅಧ್ಯಕ್ಷ ಸೋಮಶೇಖರ ಪೈಕ, ಪ್ರಮುಖರಾದ ಕೃಪಾಶಂಕರ ತುದಿಯಡ್ಕ, ಹರೀಶ್ ರೈ ಉಬರಡ್ಕ, ಪಿ.ಕೆ.ಉಮೇಶ, ಚನಿಯ ಕಲ್ತಡ್ಕ, ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ, ಸುಭೋದ್ ಶೆಟ್ಟಿ ಮೇನಾಲ, ಜಯರಾಮ ರೈ ಜಾಲ್ಸೂರು, ಪ್ರಕಾಶ್ ಯಾದವ್, ನವೀನ್ ಎಲಿಮಲೆ, ಬಜರಂಗದಳ ಸಂಚಾಲಕ ವರ್ಷಿತ್ ಚೊಕ್ಕಾಡಿ, ಹರಿಪ್ರಸಾದ್ ಎಲಿಮಲೆ, ರವಿಚಂದ್ರ ಕೊಡಿಯಾಲಬೈಲು, ದೇವಿಪ್ರಸಾದ್ ಅತ್ಯಾಡಿ, ವಿನಯ್ ಪಾಡಾಜೆ, ರಾಜೇಶ್ ಕಲ್ಲುಮುಟ್ಲು, ಪಾರ್ವತಿ ಕುಂಚಡ್ಕ, ಸುನೀಲ್ ಕೇರ್ಪಳ, ರಾಜೇಶ್ ಬೇರಿಕೆ, ರೀನಾ ಚಂದ್ರಶೇಖರ, ವಿಶಾಲ ಸೀತಾರಾಮ ಮತ್ತಿತರರು ಉಪಸ್ಥಿತರಿದ್ದರು.