ಕುಂದಾಪುರ: ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಶವಾಗಾರ ಸ್ಟೋರೇಜ್ ಯೂನಿಟ್ 2 ವಾತ್ರ ಸರಿಯಾಗಿದ್ದು ಇದರಿಂದಾಗಿ ತಾಲೂಕಿನ ಜನತೆ ಮೃತದೇಹ ಇಡಲು ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಸಮಸ್ಯೆಗೆ ಸ್ಪಂದಿಸಿದ ಕರ್ಣಾಟಕ ಬ್ಯಾಂಕ್ ಸುಸಜ್ಜಿತವಾದ ಶವಾಗಾರ ಸ್ಟೋರೇಜ್ ಯೂನಿಟ್‌ನ್ನು ಕೊಡುಗೆಯಾಗಿ ನೀಡಿರುವುದು ಶ್ಲಾನೀಯ ಎಂದು ಕುಂದಾಪುರ ಶಾಸಕ ಕಿರಣ್‌ಕುವಾರ್ ಕೊಡ್ಗಿ ಹೇಳಿದರು.
ಕರ್ಣಾಟಕ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಿಂದ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ ಶವಾಗಾರ ಸ್ಟೋರೇಜ್ ಯೂನಿಟ್ ಶನಿವಾರ ಆಸ್ಪತ್ರೆಗೆ ಹಸ್ತಾಂತರಿಸಿ ವಾತನಾಡಿದರು.
ಆಸ್ಪತ್ರೆ ಆಡಳಿತಾಧಿಕಾರಿ ಡಾ.ಚಂದ್ರ ಮರಕಾಲ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕ್ ಡಿಜಿಎಂ ವಾದಿರಾಜ ಭಟ್, ಕರ್ಣಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ, ಕುಂದಾಪುರ ಶಾಖೆ ವ್ಯವಸ್ಥಾಪಕ ರಾವೇಂದ್ರ, ಅಶೋಕ್, ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು. ಆಸ್ಪತ್ರೆ ವೈದ್ಯಾಧಿಕಾರಿ ಡಾ.ನಾಗೇಶ್ ಸ್ವಾಗತಿಸಿದರು.