ಜಿಲ್ಲೆ

ತಂತ್ರಿಗೆ ಪೂರ್ಣಕುಂಭ ಸ್ವಾಗತ : ಬಿಗಿ ಪೊಲೀಸ್ ಬಂದೋಬಸ್ತ್

ಸೌಮ್ಯ ಆರ್

ಕಾಸರಗೋಡು: ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಮೂಡಪ್ಪಸೇವೆಯ ತಾಂತ್ರಿಕ ವಿಧಿ ನೆರವೇರಿಸುವ ನಿಟ್ಟಿನಲ್ಲಿ ಮಧೂರು ದೇಗುಲಕ್ಕೆ ಆಗಮಿಸಿದ ತಂತ್ರಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರನ್ನು ಬ್ಯಾಂಡು, ವಾಲಗ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಬುಧವಾರ ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು.

ಬಿಗಿ ಬಂದೋಬಸ್ತ್: ಹೈಕೋರ್ಟ್ ಇಬ್ಬರೂ ತಂತ್ರಿವರ್ಯರು ಸೇರಿಕೊಂಡು ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆ ನಡೆಸುವಂತೆ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಡಾ.ಶಿವಪ್ರಸಾದ ತಂತ್ರಿ ಬ್ರಹ್ಮಕಲಶೋತ್ಸವ ಹಾಗೂ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಮೂಡಪ್ಪ ಸೇವೆಯ ತಂತ್ರಿಕ ವಿಧಿವಿಧಾನ ನಡೆಸಲು ತೀರ್ಮಾನವಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಿರುವಂತೆ ಮುಂಜಾಗ್ರತ ಕ್ರಮವಾಗಿ ದೇವಸ್ಥಾನದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಡಿವೈಎಸ್‌ಪಿ ಸಿ.ಕೆ ಸುನೀಲ್ ನೇತೃತ್ವದ ಪೊಲೀಸರ ತಂಡ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದರು.