ಜಿಲ್ಲೆ

ಮೂಡಪ್ಪ ಸೇವೆ ಭತ್ತದ ಕೊಯ್ಲಿಗೆ ಚಾಲನೆ

Avinash R

ಕಾಸರಗೋಡು: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 2025 ಮಾರ್ಚ್ 27ರಿಂದ ಏಪ್ರಿಲ್ 7ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಗಾಗಿ ಮಧೂರು ಸನಿಹದ ಏರಿಕ್ಕಳ ವಯನಾಡು ಕುಲವನ್, ರಕ್ತೇಶ್ವರಿ ನಾಗಬನದ ಮುಂಭಾಗದಲ್ಲಿರುವ ಬಯಲಿನಲ್ಲಿ ಬೆಳೆಸಿದ ಸಾವಯವ ಭತ್ತದ ಕಟಾವು ಬುಧವಾರ ನಡೆಯಿತು.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಭತ್ತದ ಕಟಾವಿಗೆ ಚಾಲನೆ ನೀಡಿದರು. ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಊರ ಪರವೂರ ಭಕ್ತರ ಉಪಸ್ಥಿತಿಯಲ್ಲಿ ಕಟಾವು ನಡೆಯಿತು. ಸೆ.10ರಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಗದ್ದೆ ನಾಟಿ ಮಾಡಲಾಗಿತ್ತು.