ಮಾನ್ವಿ ಈದ್ಗಾ ಫಂಕ್ಷನ್ ಹಾಲ್‌ನಲ್ಲಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ 10ನೇ ಜಿಲ್ಲಾ ಸಮ್ಮೇಳನವನ್ನು ರಾಜ್ಯ ಖಜಾಂಚಿ ಆರ್‌ಎಸ್ ಬಸವರಾಜ ಉದ್ಘಾಟಿಸಿದರು.ಸಂಘದ ತಾಲೂಕು ಅಧ್ಯಕ್ಷ ಆಂಜನೇಯ್ಯ ನಾಯಕ ಗೋರ್ಕಲ್, ಪ್ರಧಾನ ಕಾರ್ಯದರ್ಶಿ ಡಿ.ಶರಣಬಸವ, ಗಿರಿಯಪ್ಪ, ಆರ್‌ಡಿಪಿಆರ್ ನೌಕರರ ಸಂಘದ ಅಧ್ಯಕ್ಷ ಅಕ್ತರ್ ಪಾಷಾ, ವೀರನಗೌಡ ಇತರರಿದ್ದರು. 
ಜಿಲ್ಲೆ

ಮಾಸಿಕ 5 ಸಾವಿರ ರೂ. ಪಿಂಚಣಿ ನೀಡಲಿ

ರುದ್ರಪ್ಪ ವಾಲಿ

ಮಾನ್ವಿ: ಕಾರ್ಮಿಕ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿದಲ್ಲಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ರಾಜ್ಯ ಖಜಾಂಚಿ ಆರ್‌ಎಸ್ ಬಸವರಾಜ ಹೇಳಿದರು.

ಪಟ್ಟಣದ ಈದ್ಗಾ ಫಂಕ್ಷನ್ ಹಾಲ್‌ನಲ್ಲಿ ಶನಿವಾರ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ 10ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕರ ಸಂಘಟನೆಗಳ ಒಗ್ಗಟಿನ ಹೋರಾಟದಿಂದ ನಮ್ಮ ಅನೇಕ ಬೇಡಿಕೆಗಳು ಈಡೇರಿದಿವೆ. ಗ್ರಾಮ ಪಂಚಾಯಿತಿ ನೌಕರರ ಕನಿಷ್ಟ ವೇತನವನ್ನು 31 ಸಾವಿರ ರೂ. ನಿಗದಿಗೊಳ್ಳಿಸಬೇಕು. ನಿವೃತ್ತಿ ಹೊಂದಿದ ನೌಕರರಿಗೆ ಮಾಸಿಕ 5 ಸಾವಿರ ರೂ. ಪಿಂಚಣಿ ನೀಡಬೇಕು. ನೌಕರರ ಕುಟುಂಬದ ಸದಸ್ಯರಿಗೂ ಆರೋಗ್ಯ ವಿಮಾಕಲ್ಪಿಸಬೇಕು.

50 ಸಾವಿರ ರೂ. ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ನೀಡಬೇಕು, ಮರಣ ಹೊಂದಿದ ನೌಕರರ ಕುಟುಂಬದ ಸದಸ್ಯರಿಗೆ ಅನುಕಂಪದ ವೇತನ ನೀಡಬೇಕು. ಪ್ರತಿ ತಿಂಗಳು 5ರೊಳಗೆ ವೇತನ ನೀಡಬೇಕು. ಗ್ರಾಮ ಪಂಚಾಯಿತಿಗಳನ್ನು ಅಪ್‌ಗ್ರೇಡ್ ಮಾಡುವ ಮೂಲಕ ನೌಕರರಿಗೆ ಮುಂಬಡ್ತಿ ನೀಡಬೇಕೆಂದು ಆಗ್ರಹಿಸಿ ಅ.1 ರಂದು ಕಲಬುರಗಿಯಲ್ಲಿ 20 ಸಾವಿರ ಗ್ರಾಮ ಪಂಚಾಯಿತಿ ನೌಕರರಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.


ಸಿಐಟಿಯು ಜಿಲ್ಲಾ ಅಧ್ಯಕ್ಷೆ ಪದ್ಮಾ, ಸಿಐಟಿಯು ತಾಲೂಕು ಅಧ್ಯಕ್ಷ ಎಚ್. ಶಫುದ್ದೀನ್ ಪೋತ್ನಾಳ ಮಾತನಾಡಿದರು.
ಬೈಕ್ ರ‌್ಯಾಲಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಈದ್ಗಾ ಫಂಕ್ಷನ್‌ಹಾಲ್ ವರೆಗೂ ಗ್ರಾಪಂ ನೌಕರರಿಂದ ಬೈಕ್ ರ‌್ಯಾಲಿ ನಡೆಸಲಾಯಿತು. ನಿಧನರಾದ ಮಾರುತಿ ಮಾನ್ಪಡೆ, ಸಿಪಿಎಂ ರಾಷ್ಟ್ರೀಯ ಕಾರ್ಯದರ್ಶಿ ಸೀತಾರಾಮ್‌ಯಚುರಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವಿಸಲಾಯಿತು.

ಪ್ರಮುಖರಾದ ವೀರೇಶ, ಸುರೇಶ, ಅಂಬಣ್ಣ ನಾಯಕ, ಮಲ್ಲಿಕಾರ್ಜುನ, ಅಂಬಣ್ಣನಾಯಕ ಬ್ಯಾಗವಾಟ, ಬಸವರಾಜಗೌಡ, ಶರಣಬಸವ ಹರವಿ, ಆಂಜನೇಯ ನಾಯಕ, ಬಸವರಾಜಗೌಡ, ಮೌನೇಶ ಮಟ್ಟೂರು, ಶಿವರಾಜ ಸ್ವಾಮಿ ಮಲ್ಕಾಪುರ್ ಇತರರಿದ್ದರು.