ಜಿಲ್ಲೆ

ಎಡಪದವಲ್ಲಿ ಬಾಲಕಿಗೆ ಕಚ್ಚಿದ ಕೋತಿ ಸೆರೆ!

ಸೌಮ್ಯ ಆರ್

ಗುರುಪುರ: ತೆಂಕ ಎಡಪದವು ಗ್ರಾಮದ ಕುಂದೋಡಿ ದೈವಸ್ಥಾನದ ಸಮೀಪದ ಮನೆಯೊಳಗೆ ನುಗ್ಗಿದ ಕೋತಿ ಬಾಲಕಿಗೆ ಕಚ್ಚಿ ಗಾಯಗೊಳಿಸಿದ್ದು, ಕೋತಿಯನ್ನು ಭಾನುವಾರ ಅರಣ್ಯ ಇಲಾಖೆ ಸೆರೆ ಹಿಡಿದಿದೆ.

ಕೋತಿಯೊಂದು ಕಳೆದ ಮೂರ‌್ನಾಲ್ಕು ತಿಂಗಳಿಂದ ಕುಂದೋಡಿ ಪರಿಸರದಲ್ಲಿ ಸುತ್ತಾಡುತ್ತಿದ್ದು, ಶನಿವಾರ ಮಧ್ಯಾಹ್ನ 3ರ ಸುಮಾರಿಗೆ ಇಲ್ಲಿನ ಮನೆಯೊಳಗೆ ನುಗ್ಗಿ, ಮನೆಯಲ್ಲಿ ನಿದ್ರಿಸುತ್ತಿದ್ದ ದೃತಿ ಎಂಬ ಬಾಲಕಿಗೆ ಕಚ್ಚಿ ಗಾಯಗೊಳಿಸಿ ಪರಾರಿಯಾಗಿತ್ತು. ಕೋತಿ ಸೆರೆ ಹಿಡಿಯುವಂತೆ ಎಡಪದವು ಗ್ರಾಪಂ ಮತ್ತು ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗೂಡು ತಂದಿಟ್ಟು ಬಲೆ ಹಾಕಿ ಕಾರ್ಯಾಚರಣೆ ನಡೆಸಿತ್ತು. ಭಾನುವಾರ ಅಪರಾಹ್ನ ಕೋತಿ ಬಲೆಗೆ ಬಿದ್ದಿದೆ. ಗಾಯಗೊಂಡಿರುವ ಬಾಲಕಿಗೆ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ.