ಸಿಂಧನೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ಪಡೆಯುತ್ತಿರುವುದನ್ನು ವಿರೋಧಿಸಿ ಕೆಆರ್‌ಎಸ್ ಪಕ್ಷದ ಪದಾಧಕಾರಿಗಳು ಮಂಗಳವಾರ ತಹಸೀಲ್ದಾರ್ ಅರುಣ ದೇಸಾಯಿಗೆ ಮನವಿ ಸಲ್ಲಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ನಿರುಪಾದಿ ಗೋಮರ್ಸಿ, ತಾಲೂಕಾಧ್ಯಕ್ಷ ಚನ್ನಬಸವ ಸೋಮಲಾಪುರ, ಕಾರ್ಯದರ್ಶಿ ಶರಣಪ್ಪ ಗೊರವ, ಶರಣಪ್ಪ ಹಂಚಿನಾಳ, ದ್ಯಾವಣ್ಣ, ಕೃಷ್ಣ ಸುಕಾಲಪೇಟೆ ಇದ್ದರು. 
ಜಿಲ್ಲೆ

ಹಣ ವಸೂಲಿ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಿ

ಸಿಂಧನೂರು: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಸೇವಾ ಕೇಂದ್ರದಲ್ಲಿ 100 ರಿಂದ 500 ರೂ. ಜನರಿಂದ ವಸೂಲಿ ಮಾಡುತ್ತಿದ್ದು, ಅಂತಹವರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ತಹಸೀಲ್ದಾರ್ ಅರುಣ ದೇಸಾಯಿಗೆ ಮಂಗಳವಾರ ಮನವಿ ಸಲ್ಲಿಸಿದರು.


ಬಾಪೂಜಿ, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಗೃಹಲಕ್ಷ್ಮೀ ಯೋಜನೆಗೆ ನೋಂದಣೆ ಉಚಿತವಾಗಿದೆ. ಆದರೆ ಸೇವಾ ಕೇಂದ್ರದ ಸಿಬ್ಬಂದಿ ಅರ್ಜಿ ಸಲ್ಲಿಸಲು ಬಂದ ಜನರಿಂದ ಹಣ ಪಡೆಯುತ್ತಿರುವುದು ನಿಯಮ ಬಾಹಿರವಾಗಿದೆ. ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ನಿರುಪಾದಿ ಗೋಮರ್ಸಿ, ತಾಲೂಕಾಧ್ಯಕ್ಷ ಚನ್ನಬಸವ ಸೋಮಲಾಪುರ, ಕಾರ್ಯದರ್ಶಿ ಶರಣಪ್ಪ ಗೊರವ, ಶರಣಪ್ಪ ಹಂಚಿನಾಳ, ದ್ಯಾವಣ್ಣ, ಕೃಷ್ಣ ಸುಕಾಲಪೇಟೆ, ಅಮರೇಶ, ಶಂಕರ್‌ನಾಯಕ ಇದ್ದರು.