ಕವಿತಾಳದ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಕಲ್ಯಾಣ ಮಂಟಪ ಉದ್ಘಾಟನಾ ಕಾರ್ಯಕ್ರಮಕ್ಕೆ ಆಲ್ಕೋಡ ಸಿದ್ಧಾರೂಢ ಮಠದ ಸದ್ಗುರು ಸ್ವರೂಪಾನಂದ ಸ್ವಾಮೀಜಿ ಚಾಲನೆ ನೀಡಿದರು. ಕಲ್ಮಠದ ಶ್ರೀ ಸಿದ್ದಲಿಂಗಸ್ವಾಮಿ, ಆರ್ಯವೈಶ್ಯ ಸೇವಾ ಸಂಘದ ಅಧ್ಯಕ್ಷ ಉದಯಕುಮಾರ ಇಲ್ಲೂರು, ಕಾರ್ಯದರ್ಶಿ ಪ್ರಕಾಶ ಇಲ್ಲೂರು, ಯಲ್ಲಯ್ಯಶೆಟ್ಟಿ ಬಾಗೋಡಿ, ಮುತ್ತುರಾಜ್ ಇದ್ದರು. 
ಜಿಲ್ಲೆ

ಮಾದರಿಯಾಗಿವೆ ಆರ್ಯವೈಶ್ಯರ ಆದರ್ಶಗಳು

Kopala - Desk - Eraveni

ಕವಿತಾಳ: ಆರ್ಯವೈಶ್ಯ ಸಮುದಾಯದವರು ಭಾವೈಕ್ಯದೊಂದಿಗೆ ವಹಿವಾಟು ನಡೆಸುತ್ತಿದ್ದು, ಆರ್ಯವೈಶ್ಯರ ಆದರ್ಶಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಆಲ್ಕೋಡ ಸಿದ್ಧಾರೂಢ ಮಠದ ಸದ್ಗುರು ಸ್ವರೂಪಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಸೇವಾ ಸಂಘದಿಂದ ಆಯೋಜಿಸಿದ್ದ ವಾಸವಿ ಕಲ್ಯಾಣ ಮಂಟಪ ಉದ್ಘಾಟನೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ವಾಸವಿ ಕಲ್ಯಾಣ ಮಂಟಪ ಉದ್ಘಾಟನೆ

ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ ಉಪಾಧ್ಯಕ್ಷ ಆನಂದ ತುರ್ವಿಹಾಳ ಮಾತನಾಡಿ, ವ್ಯಾಪಾರ ನಂಬಿ ಬದುಕು ಕಟ್ಟಿಕೊಂಡಿರುವ ಆರ್ಯವೈಶ್ಯ ಸಮುದಾಯವರಿಗೆ ಸರ್ಕಾರ ಎಲ್ಲ ಕ್ಷೇತ್ರದಲ್ಲಿ ಮೀಸಲಾತಿ ನೀಡುವ ಮೂಲಕ ಮುಖ್ಯವಾಹಿನಿಗೆ ತರಬೇಕೆಂದು ಹೇಳಿದರು. ಪ್ರಮುಖರಾದ ಸಂದೀಪ ಇಲ್ಲೂರು, ಭಾಸ್ಕರ ರಾವ್ ಕೋಸ್ಗಿ, ಮಂಜುನಾಥ ಬಾಗೋಡಿ, ಪಲುಗುಲ ನಾಗರಾಜ, ರಾಘವೇಂದ್ರ ಶೆಟ್ಟಿ ಇದ್ದರು.