More

    ಸಾವಿತ್ರಿ ಬಾಯಿ ಫುಲೆ ಆದರ್ಶ ಶಿಕ್ಷಕಿ

    ವಿಜಯಪುರ: ಅಕ್ಷರದ ಅವ್ವ ಎಂದೇ ಖ್ಯಾತಿ ಗಳಿಸಿರುವ ಸಾವಿತ್ರಿ ಬಾಯಿ ಫುಲೆ ಎಲ್ಲರಿಗೂ ಆದರ್ಶ ಶಿಕ್ಷಕಿ ಎಂದು ನಾರಾಯಣಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಚಂದ್ರಶೇಖರ ಹಡಪದ್ ಹೇಳಿದರು.
    ಪಟ್ಟಣ ಸಮೀಪದ ನಾರಾಯಣಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿ ಬಾಯಿ ಫುಲೆ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.ಹೆಣ್ಣುಮಕ್ಕಳು ಹೊಸ್ತಿಲು ದಾಟದ ಕಾಲಘಟ್ಟದಲ್ಲಿ ಅವರ ಶೈಕ್ಷಣಿಕ ದೃಷ್ಟಿಯಿಂದ ಹೋರಾಟ ಮಾಡಿ ಸ್ತ್ರೀಯರ ಶಿಕ್ಷಣ, ಸಾಮಾಜಿಕ ನ್ಯಾಯ ಕುರಿತು ಹೊಸತನ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ಈ ಕಾರಣದಿಂದ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರನ್ನು ಸ್ಮರಿಸಬೇಕಾಗಿದೆ ಎಂದರು.
    ವಿದ್ಯಾರ್ಥಿನಿ ವಿದ್ಯಾ ಮಾತನಾಡಿ, ಸ್ವಾತಂತ್ರ್ಯ ಪೂರ್ವದ ಕಾಲಘಟ್ಟದಲ್ಲಿ ಹೆಣ್ಣಿನ ಸಬಲೀಕರಣದ ಉದ್ದೇಶದಿಂದ ಸ್ವತಃ ಶಿಕ್ಷಕಿಯಾದ ಸಾವಿತ್ರಿ ಬಾಯಿ ಫುಲೆ ಅವರಿಗೆ ಸಾಕಷ್ಟು ಅವಮಾನ ಮಾಡಿದರೂ ಎದೆಗುಂದದೆ ಶಿಕ್ಷಕಿಯಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಟ್ಟಿದ್ದರಿಂದ ನಾವೆಲ್ಲರೂ ಇಂದು ವಿದ್ಯಾವಂತರಾಗುತ್ತಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts