ಬನಹಟ್ಟಿ ಸಂತೆಯೊಳಗೆ ಹರಿಯಾಣದ ಕುರುಕ್ಷೇತ್ರ ಸಂಸದ ನಯಾಬ್​ಸಿಂಗ್ ಸೈನಿ ಪ್ರಚಾರ ನಡೆಸಿದರು. ಗೋವಿಂದ ಡಾಗಾ, ಶಿವಾನಂದ ಬುದ್ನಿ ಇತರರಿದ್ದರು. 
ಜಿಲ್ಲೆ

ಶಾಸಕ ಸಿದ್ದು ಸವದಿ ಪರ ಸಂಸದ ನಯಾಬ್​ಸಿಂಗ್ ಸೈನಿ ಮತಯಾಚನೆ

Vijayapura

ರಬಕವಿ/ಬನಹಟ್ಟಿ: ತೇರದಾಳ ವಿಧಾನಸಭೆ ಕ್ಷೇತ್ರದ ಆಯಾ ವಾರ್ಡ್​ಗಳಲ್ಲಿ ಬಿಜೆಪಿ ಬಿರುಸಿನ ಪ್ರಚಾರ ನಡೆಸುತ್ತಿದ್ದರೆ, ಬನಹಟ್ಟಿಯ ಸಂತೆಯೊಳಗೆ ಹರಿಯಾಣದ ಕುರುಕ್ಷೇತ್ರದ ಸಂಸದ ನಯಾಬ್​ಸಿಂಗ್ ಸೈನಿ ಸಿದ್ದು ಪರ ಮತಯಾಚನೆ ನಡೆಸಿದರು. ಬಿಜೆಪಿ ಅಭ್ಯರ್ಥಿ, ಶಾಸಕ ಸಿದ್ದು ಸವದಿ ಪರ ಕರಪತ್ರ ಹಂಚಿ ಮಾರುಕಟ್ಟೆಯಲ್ಲಿದ್ದ ಜನತೆಗೆ ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದರು.

ಇವರೊಂದಿಗೆ ಗೋವಿಂದ ಡಾಗಾ, ಬಸವರಾಜ ಐವಳ್ಳಿ, ಶಿವಾನಂದ ಬುದ್ನಿ, ಪ್ರಭಾಕರ ಮೊಳೇದ, ದುಂಡಪ್ಪ ಮಾಚಕನೂರ ಸಾಥ್ ನೀಡಿದರು.

ತೇರದಾಳ ಕ್ಷೇತ್ರದ ಶಾಸಕರಾಗಿ ಕಳೆದ ಬಾರಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ, ನೇಕಾರ ಸಮುದಾಯಕ್ಕೆ ಐತಿಹಾಸಿಕ ಕಾರ್ಯಗಳನ್ನು ಒದಗಿಸಿದ್ದಾರೆ. ರೈತ ಹಾಗೂ ನೇಕಾರ ಸಮುದಾಯಕ್ಕೆ ಮತ್ತಷ್ಟು ಯೋಜನೆಗಳನ್ನು ಒದಗಿಸಲು ಬಿಜೆಪಿ ಆಡಳಿತಕ್ಕೆ ತನ್ನಿ ಎಂದು ಸಂಸದ ಸೈನಿ ಮನವಿ ಮಾಡಿದರು.