ಮಸ್ಕಿ: ಜಲ ಜೀವನ್ ಮಿಷನ್ ಯೋಜನೆಯಿಂದ ನಲ್ಲಿಗಳ ಮೂಲಕ ಜನರ ಮನೆಗಳಿಗೆ ಶುದ್ಧ್ದವಾದ ಕುಡಿಯುವ ನೀರನ್ನು ಪೂರೈಕೆ ಮಾಡಲಾಗವುದು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ತಾಲ್ಲೂಕಿನ ಬಳಗಾನೂರು ಹೋಬಳಿಯ ಬೆಳ್ಳಿಗನೂರು ಗ್ರಾಮದಲ್ಲಿ ಮಂಗಳವಾರ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಸರ್ಕಾರದಿಂದ ಶೇ.45 ಮತ್ತು ರಾಜ್ಯ ಸರ್ಕಾರದಿಂದ ಶೇ.45 ಮತ್ತು ಸಾರ್ವಜನಿಕರಿಂದ ಶೇ.10 ರಷ್ಟು ಹಣವನ್ನು ಬಳಸುವಂತೆ ಯೋಜನೆಯನ್ನು ರೂಪಿಸಲಾಗಿತ್ತು. ನಂತರ ಸಾರ್ವಜನಿಕರ ಹಣವನ್ನು ರಾಜ್ಯದ ಸಿದ್ದರಾಮಯ್ಯ ಸರ್ಕಾರ ಶೇ.10 ರಷ್ಟು ಹಣವನ್ನು ನೀಡುವ ಮೂಲಕ ಜನರಿಗೆ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.
ಗೌಡನಬಾವಿ ಗ್ರಾಪಂ ಅಧ್ಯಕ್ಷ ರವಿಕುಮಾರ, ಕಾಂಗ್ರೆಸ್ ಪ್ರಮುಖರಾದ ವಂದಾಲೆಪ್ಪ, ರಮೇಶ, ಮರಿಯಪ್ಪ ಇದ್ದರು.