ಜಿಲ್ಲೆ

ನಟ ಚಿರಂಜೀವಿ ಮನ ಗೆದ್ದ ಪ್ರದೀಪ್​ ಈಶ್ವರ್​: ಚಿಕ್ಕಬಳ್ಳಾಪುರ ಶಾಸಕನಿಗೆ ಮೆಗಾಸ್ಟಾರ್​ ಮೆಚ್ಚುಗೆ | Pradeep Eshwar

ಹೈದರಾಬಾದ್​: ಚಿಕ್ಕಬಳ್ಳಾಪುರದ ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್ ( Pradeep Eshwar )​ ಅವರು ಮೆಗಾಸ್ಟಾರ್​ ಚಿರಂಜೀವಿ ( Chiranjeevi ) ಅವರನ್ನು ಹೈದರಾಬಾದ್​ನಲ್ಲಿ ನಿನ್ನೆ (ಅ.14) ಭೇಟಿಯಾಗಿದ್ದಾರೆ. ಈ ಭೇಟಿ ಒಂದೊಳ್ಳೆ ಕೆಲಸಕ್ಕೆ ಎಂಬುದು ವಿಶೇಷ.

ಪ್ರದೀಪ್​ ಈಶ್ವರ್​ ಅವರು ನಟಿ ಚಿರಂಜೀವಿ ಅವರ ಚಿರಂಜೀವಿ ರಕ್ತ ನಿಧಿಗೆ ರಕ್ತದಾನ ( Blood Donate ) ಮಾಡಿದ್ದಾರೆ. ಅವರ ಜೊತೆಗೆ ಸಂಬಂಧಿ ರಮೇಶ್​ ಬಾಬು ಕೂಡ ರಕ್ತದಾನ ಮಾಡಿದ್ದಾರೆ. ಚಿರಂಜೀವಿ ಅವರನ್ನು ಭೇಟಿಯಾಗಲು ಹೈದರಾಬಾದ್‌ಗೆ ಬಂದಿದ್ದ ಪ್ರದೀಪ್​ ಈಶ್ವರ್​, ಅದಕ್ಕೂ ಮೊದಲು ಚಿರಂಜೀವಿ ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದಾನ ಮಾಡಿದ್ದಾರೆ.

ಇದಾದ ನಂತರ ಪ್ರದೀಪ್ ಈಶ್ವರ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರನ್ನು ಅವರ ನಿವಾಸದಲ್ಲಿ ಗೌರವಾರ್ಥವಾಗಿ ಭೇಟಿಯಾದರು. ಈ ವೇಳೆ ಈಶ್ವರ್​ ಅವರನ್ನು ಚಿರಂಜೀವಿ ವಿಶೇಷವಾಗಿ ಅಭಿನಂದಿಸಿದರು. ಈ ಕುರಿತು ಚಿರಂಜೀವಿ ನೇತ್ರ ಮತ್ತು ರಕ್ತನಿಧಿ ಕೇಂದ್ರ ಪ್ರಕಟಣೆ ಹೊರಡಿಸಿದೆ.

ಅಂದಹಾಗೆ ಮೆಗಾಸ್ಟಾರ್ ಚಿರಂಜೀವಿ ಅವರು ಕಳೆದ ಕೆಲವು ದಿನಗಳಿಂದ ಚಿಕನ್ ಗುನ್ಯಾದಿಂದ ಬಳಲುತ್ತಿದ್ದಾರೆ. ಕೊಂಚ ಚೇತರಿಸಿಕೊಂಡಿರುವ ಅವರು ಇಂದು ನಾಗಬಂಧಂ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.