ಜಿಲ್ಲೆ

ನೂತನ ಜಿಲ್ಲಾಧಿಕಾರಿಗೆ ಶಾಸಕಿಯಿಂದ ಅಭಿನಂದನೆ

ಸೌಮ್ಯ ಆರ್

ಕಡಬ: ದ.ಕ. ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ದರ್ಶನ್ ಅವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೇಟಿಯಾಗಿ ಶಾಸಕಿ ಭಾಗೀರಥಿ ಮುರುಳ್ಯ ಅಭಿನಂದಿಸಿದರು.

ಸುಳ್ಯ ವಿಧಾನಸಭಾ ಕ್ಷೇತ್ರದ ಕಂದಾಯ ಇಲಾಖೆಯ ಸಮಸ್ಯೆಗಳ ಬಗ್ಗೆ ಮತ್ತು 94ಸಿ, ಪ್ಲಾಟಿಂಗ್, ಭಾಗಶಃ ಅರಣ್ಯ, ಬಡವರಿಗೆ ಮನೆ ಕಟ್ಟಲು ತೊಂದರೆಯಾಗುತ್ತಿರುವ ಕೆಂಪುಕಲ್ಲು, ಮರಳು ವಿಚಾರಗಳನ್ನು ಡಿ.ಸಿ. ಗಮನಕ್ಕೆ ತರಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹರೀಶ ಕಂಜಿಪಿಲಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುಳಿಯ ಕೇಶವ ಭಟ್, ಭಾಜಪ ಜಿಲ್ಲಾ ಉಪಾಧ್ಯಕ್ಷ ರಾಕೇಶ ರೈ, ಚಾರ್ವಾಕ ಸಿ.ಎ. ಬ್ಯಾಂಕ್ ಅಧ್ಯಕ್ಷ ಗಣೇಶ ಉದನಡ್ಕ, ಗ್ರಾಮ ಪಂಚಾಯಿತಿ ಸದಸ್ಯ ರಾಕೇಶ ಮೆಟ್ಟಿನಡ್ಕ, ಕೈೊಲ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ನಾಯ್ಕ ಎಣಿತಡ್ಕ ಉಪಸ್ಥಿತರಿದ್ದರು.