ಜಿಲ್ಲೆ

ಇದು ಜಗತ್ತಿನ ದುಬಾರಿ ಬೆಲೆಯ ಮಾವು; ಕೆ.ಜಿ.ಗೆ 2.5 ಲಕ್ಷ ರೂಪಾಯಿ!

Bengaluru - General - Rama Kishan K V

ಕೊಪ್ಪಳ: ಹಣ್ಣುಗಳ ರಾಜ ಮಾವಿನ ಹೆಣ್ಣಿಗೆ ಅಬ್ಬಬ್ಬಾ ಅಂದರೆ ಒಂದು ಕೆ.ಜಿಗೆ 200-300 ರೂ, ದರ ಇರಬಹುದು. ಆದರೆ, ಜಪಾನ್ ದೇಶದ ಮಿಯಾ ಜಾಕಿ ಹೆಸರಿನ ಮಾವಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಜಿಗೆ 2.5 ಲಕ್ಷ ರೂ. ದರವಿದೆ,

ಮಿಯಾ ಜಾಕಿ ಮಾವು ಸಾಮಾನ್ಯವಾಗಿ 350 ರಿಂದ 900 ಗ್ರಾಂವರೆಗೆ ಬೆಳೆಯುತ್ತದೆ. ಸಾಮಾನ್ಯ ಮಾವು ಹಸಿರು, ಹಳದಿ ಬಣ್ಣ ಹೊಂದಿದ್ದರೆ, ಮಿಯಾ ಜಾಕಿ ಪರ್ಪಲ್‌ ಬಣ್ಣ ಹೊಂದಿದೆ. ಉಳಿದ ಮಾವಿಗಿಂತ ಹೆಚ್ಚು ವಿಟಮಿನ್ ಎ ಹಾಗೂ ಶೇ.15 ಹೆಚ್ಚುವರಿ ಸಕ್ಕರೆ ಅಂಶ ಹೊಂದಿದೆ.

ಇದನ್ನು ಜಪಾನ್, ಫಿಲಿಪೈನ್ಸ್, ಬಾಂಗ್ಲಾದೇಶ, ಥಾಯ್ಲೆಂಡ್‌ನಲ್ಲಿ ಬೆಳೆಯಲಾಗುತ್ತದೆ. ಕೊಪ್ಪಳದಲ್ಲಿ ಮಾವು ಮೇಳ ಹಮ್ಮಿಕೊಂಡಿದ್ದು, ಮಿಯಾ ಜಾಕಿ ಮಾವಿನ ಹಣ್ಣನ್ನು ಪ್ರದರ್ಶನಕ್ಕಿಡಲಾಗಿದೆ. ಕೆಜಿಗೆ 2.5 ಲಕ್ಷ ದರ ಎಂಬ ಸುದ್ದಿ ಕೇಳಿ ಜನರು ಆಶ್ಚರ್ಯದಿಂದ ನೋಡುತ್ತಿದ್ದಾರೆ. ಕೆಲವರು ಅದರೊಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.