ಜಿಲ್ಲೆ

ಪ್ರೇಯಸಿ ಜೊತೆ ಸಿಕ್ಕಿಬಿದ್ದ ಹೆಡ್ ಕಾನ್ ಸ್ಟೇಬಲ್

ರುದ್ರಪ್ಪ ವಾಲಿ

ಸಿರವಾರ: ಪಟ್ಟಣದ ಹೆಡ್ ಕಾನ್‌ಸ್ಟೇಬಲ್ ರಾಜ್ ಮಹಮ್ಮದ್ ಅವರು ಮನೆಯಲ್ಲಿ ಪ್ರೇಯಸಿಯ ಜೊತೆ ಇದ್ದಾಗ ಹೆಂಡತಿ ಪ್ಯಾರಿ ಬೇಗಂ ಅವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ರಾಜ್ ಮಹಮ್ಮದ್ 4 ವರ್ಷದಿಂದ ಹೆಂಡತಿಯನ್ನು ದೂರ ಮಾಡಿ ಪ್ರೇಯಸಿಯ ಸಂಗ ಮಾಡಿದ್ದ. ಹೆಂಡತಿ ದೇವದುರ್ಗ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದು, ಮೇಲಾಧಿಕಾರಿಗಳಿಂದ ರಾಜ್ ಮಹಮ್ಮದ್‌ಗೆ ಬುದ್ದಿ ಹೇಳಿಸಿದ್ದರು.

ಪ್ರೇಯಸಿಯ ಸಂಗ ಬಿಡದ ಕಾರಣ ಸಿರವಾರ ಮನೆಯಲ್ಲಿ ರಾಜ್ ಮಹಮ್ಮದ್ ಪ್ರೇಯಸಿಯ ಜೊತೆಗೆ ಇರುವ ಮಾಹಿತಿ ಪಡೆದ ಪತ್ನಿ ಬುಧವಾರ ಆಗಮಿಸಿ ಮನೆ ಲಾಕ್ ಮಾಡಿ ಎಸ್ಪಿಗೆ ಕೆರೆ ಮಾಡಿ ದೂರು ನೀಡಿದ ಹಿನ್ನೆಲೆ ಪಿಎಸೈ ಗುರುಚಂದ್ರ ಯಾದವ್ ಅವರು ಮನೆ ಡೋರ್ ತೆಗೆದಾಗ ರೆಡ್ ಹ್ಯಾಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿಲ್ಲ.