ಕಾರವಾರ: ಆರ್.ವಿ.ದೇಶಪಾಂಡೆ ಅವರು ಹಿರಿಯರಿದ್ದಾರೆ. ಅವರ ಬಗ್ಗೆ ಅಪಾರ ಗೌರವವಿದೆ. ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂಬುದು ನನ್ನದೂ ಒತ್ತಾಯ. ನಾನೂ ಅದಕ್ಕೆ ಬೆಂಬಲ ನೀಡುತ್ತೇನೆ. ಇಬ್ಬರು ಸಚಿವರಾದರೆ ಜಿಲ್ಲೆಯ ಅಭಿವೃದ್ಧಿಗೆ ಇನ್ನಷ್ಟು ಅನುಕೂಲವಾಗಲಿದೆ. ಆದರೆ, ಹಾಲಿ ಸಚಿವರನ್ನು ಬದಲು ಮಾಡಿ ಕೊಡುತ್ತಾರೆ ಎನ್ನಲಾರೆ. ಅದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಲೋಕಸಭೆ ಚುನಾವಣೆ ಸೋಲಿನ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಶುಕ್ರವಾರ ನಗರದಲ್ಲಿ ಅವರು ಉತ್ತರಿಸಿದರು. ಕಳೆದ 30 ವರ್ಷಗಳಿಂದ ನಾವು ಉತ್ತರ ಕನ್ನಡದಲ್ಲಿ ಲೋಕಸಭೆ ಚುನಾವಣೆ ಸೋಲುತ್ತ ಬಂದಿದ್ದೇವೆ. ಏಕೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ. ಆದರೆ, ಯಾವ ಅವಽಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಆಗಿದ್ದನ್ನು ನಾನು ನೋಡಿಲ್ಲ ಎಂದರು.
ಬಡವರಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಜನ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಹಾಗಾಗದ ಬಗ್ಗೆ ನನಗೂ ಬೇಸರವಿದೆ. ಆದರೆ, ಗ್ಯಾರಂಟಿ ಯೋಜನೆಗಳಿಗೂ ಲೋಕಸಭೆ ಚುನಾವಣೆಗೂ ತಳಕು ಹಾಕಬೇಡಿ. ಬಡವರಿಗಾಗಿ ತಂದ ಯೋಜನೆಗಳು ಮುಂದುವರಿಯಲಿವೆ ಎಂದರು.
ಜಿಲ್ಲಾ ವಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ತ್ರೆÊಮಾಸಿಕ ಕೆಡಿಪಿ ಸಭೆಗೆ ಯಾವುದೇ ಕಾಂಗ್ರೆಸ್ ಸೇರಿದಂತೆ ಯಾವುದೇ ಶಾಸಕರು ಎಂಎಲ್‌ಸಿಗಳೂ ಬಂದಿರಲಿಲ್ಲ. ಅದಕ್ಕೆ ಪ್ರತಿಕ್ರಿಯಿಸಿದ ಮಂಕಾಳ ವೈದ್ಯ, ನಾಲ್ಕು ತಿಂಗಳ ಚುನಾವಣೆ ಬಿಡುವಿನ ನಂತರ ಮತ್ತೆ ಸರ್ಕಾರದ ಕಾರ್ಯಗಳು ಚುರುಕಾಗಿವೆ. ನೋಡ, ನೋಡುತ್ತ ಒಂದು ವರ್ಷ ಕಳೆದು ಹೋಗಿದೆ. ಇನ್ನು ನಾಲ್ಕು ವರ್ಷ ಮಾತ್ರ ನಮ್ಮ ಅವಽ ಇದೆ. ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸ ತರಬೇಕು. ಇದರಿಂದ ಶಾಸಕರು ಬೆಂಗಳೂರಿಗೆ ತೆರಳಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಬಂದರೂ ಸಚಿವ ಸ್ಥಾನದಿಂದ ವಂಚಿತರಾದ ಪಕ್ಷದ ಹಿರಿಯ ಆರ್.ವಿ.ದೇಶಪಾಂಡೆ ಜಿಲ್ಲೆಯಲ್ಲಿ ಮಂಕಾಳ ವೈದ್ಯ ನಡೆಸುವ ಯಾವುದೇ ಸಭೆಗೆ ಹಾಜರಾಗಿರಲಿಲ್ಲ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಅಽಕಾರ ವಹಿಸಿಕೊಂಡು ಹಲವು ತಿಂಗಳು ಕಳೆದರೂ ತಮ್ಮ ಕ್ಷೇತ್ರ ಬಿಟ್ಟು ಅವರು ಹೊರಗಡೆ ಸಭೆಯನ್ನೂ ನಡೆಸಿರಲಿಲ್ಲ. ಆದರೆ, ಈಗ ಜಿಲ್ಲೆಯಲ್ಲಿ ಸಭೆ ನಡೆಸಲು ಅವರು ಮುಂದಾಗಿದ್ದಾರೆ.
ಜೂನ್ 21 ರಿಂದ ಕ್ಷೇತ್ರದಲ್ಲಿ ಪ್ರವಾಸ ನಡೆಸುವ ಅವರು ಜೂ.26 ರಂದು ಬೆಳಗ್ಗೆ 11 ಗಂಟೆಗೆ ಕಾರವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಎಂಎಲ್‌ಸಿಗಳು, ನಿಗಮ ಮಂಡಳಿಗಳು, ನಗರಸಭೆಗಳ ಸದಸ್ಯರು ಜಿಲ್ಲೆ ಮತ್ತು ತಾಲೂಕು ಮಟ್ಟದ ವಿವಿಧ ಅಽಕಾರಿಗಳ ಸಭೆ ನಡೆಸಿ, ಆಡಳಿತ ಸುಧಾರಣೆಯ ಬಗ್ಗೆ ಸಲಹೆಗಳನ್ನು ಪಡೆಯುವರು. ಜೂ 27 ರಂದು ಧಾರವಾಡ, 28 ರಂದು ಬೆಳಗಾವಿಯಲ್ಲಿ ಇದೇ ರೀತಿ ಸಭೆಗಳನ್ನು ನಡೆಸಲಿದ್ದಾರೆ.