ಬೆಂಗಳೂರು: ರಾಜ್ಯದಲ್ಲಿ ಒಂದೇ ರೀತಿಯ ಕರೊನಾ ರೂಲ್ಸ್ ಇದೆ ಎಂದು ಯಾರು ಹೇಳಿದ್ದು? ಯಾವ ಕರ್ಫ್ಯೂ ಇಲ್ಲ, ಏನೂ ಇಲ್ಲ. ನಮ್ಮ ಶಿವಮೊಗ್ಗದಲ್ಲಿ ಯಾವ ಸುಡುಗಾಡು ಇಲ್ಲ... ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಗುರುವಾರ ಕ್ಯಾಬಿನೆಟ್ ಸಭೆಗೆ ಹೋಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಜಿಲ್ಲೆಗಳಿಗೆ ಇನ್ನೂ ಆದೇಶ ಬಂದಿಲ್ಲ. ನಾನು ಬೇಜಾರು ಮಾಡಿಕೊಂಡಿಲ್ಲ. ಜನರ ಭಾವನೆಗಳನ್ನ ನಿನ್ನೆ ವ್ಯಕ್ತಪಡಿಸಿದ್ದೆ ಅಷ್ಟೆ. ಕರೊನಾ-ಒಮಿಕ್ರಾನ್ ಸೋಂಕು ತಡೆ ಹಿನ್ನೆಲೆ ಬೆಂಗಳೂರಿನಲ್ಲಿ ಬಿಗಿ ಮಾಡೋದು ಮಾಡಿ. ಬೇರೆ ಜಿಲ್ಲೆಗಳಲ್ಲಿ ಮಾಡುವುದು ಬೇಡ. ಇದನ್ನೇ ಸಿಎಂ ಜತೆ ಮಾತನಾಡುವೆ. ಎಲ್ಲಿ ಸಮಸ್ಯೆ ಇದೆ ಅಲ್ಲಿ ಬಿಗಿ ಮಾಡ್ತೇವೆ ಎಂದರು.
ತಜ್ಙರ ಸಲಹೆಯಂತೆ ಮೊನ್ನೆ ಕರೊನಾ ತಡೆಗೆ ಟೈಟ್ ರೂಲ್ಸ್ ಬಗ್ಗೆ ನಿರ್ಧಾರವಾಗಿತ್ತು. ಇಂದು ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡ್ತೇವೆ. ಯಾವ ಜಿಲ್ಲೆಗಳಲ್ಲಿ ಸೋಂಕು ಕಡಿಮೆ ಇದೆ ಅಲ್ಲಿ ಬೇಡ ಎಂದು ಹೇಳ್ತೇವೆ. ಎಲ್ಲಿ ಸಮಸ್ಯೆ ಇದೆ ಅಲ್ಲಿ ಮಾಡ್ತೇವೆ. ಎಲ್ಲಿ ಸಮಸ್ಯೆ ಇಲ್ಲ ಅಲ್ಲಿ ತೆರವು ಮಾಡೋಣ ಎಂದರು ಈಶ್ವರಪ್ಪ ಹೇಳಿದರು.