ಹೆಬ್ರಿ: ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಬೇಕಾದರೆ ಯೋಗದಿಂದ ಸಾಧ್ಯವಾಗಿದೆ. ಯಾವುದೇ ರೋಗಗಳಿಲ್ಲದೆ ಬಾಳಬೇಕಾದರೆ ನಿರಂತರವಾಗಿ ಯೋಗ ಮಾಡಬೇಕು. ಪ್ರಾಣಾಯಾಮ, ಜ್ಞಾನದಿಂದ ಮನಸ್ಸು ಕೇಂದ್ರೀಕೃತವಾಗಿರುತ್ತದೆ ಎಂದು ಹವ್ಯಾಸಿ ಯೋಗ ಪಟು ಶ್ರೀನಿವಾಸ ಶೆಟ್ಟಿ ಹೇಳಿದರು. ಶಾಂತಿನಿಕೇತನದ ವತಿಯಿಂದ ಕುಡಿಬೈಲ್ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಶಾಂತಿನಿಕೇತನ ಅಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ರೀ, ಆಡಳಿತ ಮಂಡಳಿ ಸದಸ್ಯರಾದ ನರೇಂದ್ರ, ನಾಗರಾಜ್, ವಿದ್ಯಾರ್ಥಿ ಘಟಕದ ಸದಸ್ಯರಿದ್ದರು.
ಮುದ್ರಾಡಿ ಎಂಎನ್‌ಡಿಎಸ್‌ಎಂ ಅನುದಾನಿತ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ ನಡೆಯಿತು. ಮುಖ್ಯಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ದೈಹಿಕ ಶಿಕ್ಷಣ ಶಿಕ್ಷಕ ರಘುಪತಿ ಹೆಬ್ಬಾರ್, ಶಿಕ್ಷಕರಾದ ಪಿ.ವಿ.ಆನಂದ ಸಾಲಿಗ್ರಾಮ, ಮಹೇಶ್ ನಾಯ್ಕ, ಶ್ಯಾಮಲಾ ಕೊಠಾರಿ, ಚಂದ್ರಕಾಂತಿ ಹೆಗ್ಡೆ ಪಾಲ್ಗೊಂಡಿದ್ದರು.