ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಇಂದ್ರಧನುಷ್ ಅಭಿಯಾನವನ್ನು ಮಗುವಿಗೆ ಲಸಿಕೆ ಹಾಕುವ ಮೂಲಕ ಗ್ರಾಪಂ ಅಧ್ಯಕ್ಷೆ ಎಚ್.ಹೊನ್ನೂರಮ್ಮ ಚಾಲನೆ ನೀಡಿದರು. ಪ್ರಮುಖ ಎಚ್.ಗಂಗಾಧರ, ಸಿಎಚ್‌ಒ ಎ.ಈರಣ್ಣ, ಆಶಾ ಕಾರ್ಯಕರ್ತೆ ಟಿ.ಸುಧಾ ಇನ್ನಿತರರಿದ್ದರು. 
ಜಿಲ್ಲೆ

ರೋಗ ನಿವಾರಣೆಗೆ ಲಸಿಕೆ ಅನಿವಾರ್ಯ

ಪ್ರವೀಣ ಉದುಸಾ ದಲಬಂಜನ್

ಕಂಪ್ಲಿ: ಐದು ವರ್ಷದೊಳಗಿನ ಮಕ್ಕಳಿಗೆ ಸಕಾಲದಲ್ಲಿ ಲಸಿಕೆ ಹಾಕಿಸುವಲ್ಲಿ ಪಾಲಕರು ಜಾಗೃತಿವಹಿಸಬೇಕು ಎಂದು ದೇವಸಮುದ್ರ ಪಿಎಚ್‌ಸಿ ವೈದ್ಯಾಧಿಕಾರಿ ಡಾ.ರೇವಣಸಿದ್ಧ ಕೋರಿ ಹೇಳಿದರು.

ರೋಗಗಳಿಗೆ ಲಸಿಕೆ ಮದ್ದು

ತಾಲೂಕಿನ ಮೆಟ್ರಿ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಇಂದ್ರಧನುಷ್ 5.0 ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ರುಬೆಲ್ಲಾ, ದಡೋರಾ ರೋಗ ನಿರ್ಮೂಲನೆಗೆ ಲಸಿಕೆ ಹಾಕಿಸುವುದು ಮದ್ದಾಗಿದೆ. ಇಂದಿನ ಲಸಿಕಾ ಕಾರ್ಯಕ್ರಮದಲ್ಲಿ ದೇವಸಮುದ್ರ ಪಿಎಚ್‌ಸಿ ವ್ಯಾಪ್ತಿಯಲ್ಲಿನ ಈಗಾಗಲೇ 35 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. 5 ವರ್ಷದೊಳಗಿನ 171 ಮಕ್ಕಳು, 29 ತಾಯಂದಿರಿದ್ದಾರೆ. ವಾರದೊಳಗೆ ಲಸಿಕೆ ಹಾಕಲಾಗುವುದು ಎಂದರು.

ಲಸಿಕೆ ಅಭಿಯಾನಕ್ಕೆ ಮೆಟ್ರಿ ಗ್ರಾಪಂ ಅಧ್ಯಕ್ಷೆ ಎಚ್.ಹೊನ್ನೂರಮ್ಮ ಗಂಗಾಧರ ಚಾಲನೆ ನೀಡಿದರು. ಪಿಎಚ್‌ಸಿ ಒ ಪಿ.ರಮೀಜಾ, ಎಚ್‌ಐಒ ಕೆ.ಯರ‌್ರಿಸ್ವಾಮಿ, ಸಿಎಚ್‌ಒ ಎ.ಈರಣ್ಣ, ಆಶಾ ಕಾರ್ಯಕರ್ತೆಯರಾದ ಎಚ್.ಸೌಭಾಗ್ಯವತಿ, ಜಿ.ಕೆ.ಸುಜಾತ, ಟಿ.ಸುಧಾ, ಟಿ.ವಾಸಂತಿ ಸೇರಿ ಇತರರಿದ್ದರು.