ಶಿರ್ವ: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ಬ್ರಹ್ಮಾವರ ಸರ್ಕಾರಿ ಪಿಯು ಕಾಲೇಜು(ಹೈಸ್ಕೂಲ್ ವಿಭಾಗ), ಹಿರಿಯಡ್ಕ ಕೆಪಿಎಸ್, ಬೆಳ್ಮಣ್ ಎಸ್‌ಎಲ್‌ಜೆೆಐ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ವಿದ್ಯಾರ್ಥಿಗಳಿಗೆ ವಾರ್ಗದರ್ಶನ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳಲ್ಲಿ ಹೊಸತನ, ಸೃಜನಶೀಲತೆ, ವಿಜ್ಞಾನ ತಾಂತ್ರಿಕ ಕ್ಷೇತ್ರಗಳತ್ತ ಆಸಕ್ತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ವಿದ್ಯಾರ್ಥಿಗಳ ಆವಿಷ್ಕಾರ ಶಕ್ತಿ ಬೆಳೆಸುವಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‌ನ ಪಾತ್ರ ವಿವರಿಸಲಾಯಿತು.
ವಿದ್ಯಾರ್ಥಿಗಳು ತಯಾರಿಸಿದ ವಾದರಿ, ಪ್ರೋಟೋಟೈಪ್‌ಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಲ್ಲಿ ಕುತೂಹಲ ಹೆಚ್ಚಿಸಲು ಸಂವಾದಾತ್ಮಕ ಚರ್ಚೆ, ಗುಂಪು ಚಟುವಟಿಕೆ ಹಮ್ಮಿಕೊಂಡು, ವಿದ್ಯಾರ್ಥಿಗಳು ತಾಂತ್ರಿಕ ವಿಷಯ ಹಾಗೂ ಭವಿಷ್ಯದ ಅವಕಾಶಗಳ ಕುರಿತು ಚರ್ಚಿಸಿದರು.