ತಾವರಗೇರಾ ಸಮೀಪದ ಮೆಣೇಧಾಳ ಗ್ರಾಪಂ ನೂತನ ಕಟ್ಟಡವನ್ನು ಶಾಸಕ ದೊಡ್ಡನಗೌಡ ಪಾಟೀಲ್ ಗುರುವಾರ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ದಾವಲ್ ಬಾಷುಸಾಬ್, ಉಪಾಧ್ಯಕ್ಷ ಸೋಮಣ್ಣ ಬುಡಕುಂಟಿ, ಪಿಡಿಒ ಬಸವರಾಜ ರ‌್ಯಾವಣಕಿ, ಕಾರ್ಯದರ್ಶಿ ಮಂಜುನಾಥ ಕಮ್ಮಾರ, ಜೆಇ ನೀಲಕಂಠಪ್ಪ ಗೋಟೂರು ಇದ್ದರು.  
ಜಿಲ್ಲೆ

ಮೆಣೇಧಾಳ ಪಂಚಾಯಿತಿ ಕಟ್ಟಡ ಜಿಲ್ಲೆಗೆ ಮಾದರಿ: ಶಾಸಕ ದೊಡ್ಡನಗೌಡ ಬಣ್ಣನೆ

Gangavati - Desk - Veeresh S Ullagaddi

ತಾವರಗೇರಾ: ನೂತನವಾಗಿ ನಿರ್ಮಿಸಿದ ಎಲ್ಲ ಸೌಲಭ್ಯ ಹೊಂದಿರುವ ಮೆಣೇಧಾಳ ಗ್ರಾಮ ಪಂಚಾಯಿತಿ ಕಟ್ಟಡ ಇಡೀ ಜಿಲ್ಲೆಗೆ ಮಾದರಿಯಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.


ಸಮೀಪದ ಮೆಣೇಧಾಳ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಗ್ರಾಮಸೌಧ ( ಗ್ರಾಮ ಪಂಚಾಯತ) ಕಟ್ಟಡ ಉದ್ಘಾಟಿಸಿ ಗುರುವಾರ ಮಾತನಾಡಿದರು. ಗ್ರಾಪಂ ಕಟ್ಟಡ ಭಾರತ ನವ ನಿರ್ಮಾಣ ಕೇಂದ್ರ ಹಾಗೂ ಎನ್‌ಆರ್‌ಎಲ್ ಎಮ್ ಮಹಿಳಾ ಸ್ವ ಸಹಾಯ ಸಂಘದಡಿ ನಿರ್ಮಿಸಿರುವುದು ಶ್ಲಾಘನೀಯವಾಗಿದೆ. ಗ್ರಾಮಸ್ಥರಿಗೆ ಉತ್ತಮ ಸೇವೆ ನೀಡಲು ಸದಸ್ಯರು, ಸಿಬ್ಬಂದಿಗಳು ಮುಂದಾಗಬೇಕು ಎಂದರು.


ಪ್ರಮುಖರಾದ ಅನ್ನಪೂರ್ಣ ಶಿವಮೂರ್ತಿ, ಯಂಕಪ್ಪ ಗರಜನಾಳ,ಮೆಹಬೂಬಸಾಬ, ಪ್ರಕಾಶಗೌಡ ಬೆದವಟಿಗಿ, ಉಮೇಶ ನಾಯಕ, ಶಿವರಾಜಗೌಡ ಪೊಲೀಸ್ ಪಾಟೀಲ್, ಅರುಣ್, ಚಂದ್ರಶೇಖರ ನಾಲತವಾಡ, ರಮೇಶ ಗಿರಣಿ, ಬಬ್ರುವಾಹನ ಗುಳೇದ, ಶಾಂತಪ್ಪ, ತುಳಜಾರಾಮಸಿಂಗ್, ಛತ್ರಪ್ಪ, ಖಾಸೀಮಸಾಬ, ಸದ್ಯರು, ಸಿಬ್ಬಂದಿಗಳು ಇದ್ದರು.