ಹೆಬ್ರಿ: ಸಹಕಾರಿಯೂ ಪ್ರಥಮ ವರ್ಷದಲ್ಲಿ ಲಾಭಾಂಶಕ್ಕೆ ಬಂದಿರುವುದು ಅತ್ಯಂತ ಸಂತಸದ ವಿಷಯ. ಸದಸ್ಯರು ಸಹಕಾರಿಯ ಬೆಳವಣಿಗೆಯಲ್ಲಿ ನಿಂತರವಾಗಿ ತೊಡಗಿಕೊಂಡಾಗ ಅದೊಂದು ಯಶಸ್ವಿ ಸಂಸ್ಥೆಯಾಗಿ ಬೆಳವಣಿಗೆ ಆಗುತ್ತದೆ. ಕಾರ್ಯ ವ್ಯಾಪ್ತಿ ಹೆಚ್ಚಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು. ಸದಸ್ಯರ ಸಕ್ರಿಯ ತೊಡಗಿಕೊಳ್ಳುವಿಕೆ ಸಹಕಾರಿಯ ಆಸ್ತಿ ಎಂದು ಸಂದ ಅಧ್ಯಕ್ಷ ಶ್ರೀಧರ ಪೂಜಾರಿ ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ತಾಣ ಹೆಬ್ರಿಯಲ್ಲಿ ಶನಿವಾರ ನಡೆದ ಸೂರ್ಯ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಡಿವಿಡೆಂಟ್ ಘೋಷಣೆ ಮಾಡಲಾಯಿತು. ಉಪಾಧ್ಯಕ್ಷ ರಾಜಪ್ಪ ಬಿ., ಕಾರ್ಯದರ್ಶಿ ಅಶ್ವಿನಿ ಕುಲಾಲ್, ಆಂತರಿಕ ಸಲಹೆಗಾರ ನರಸಿಂಹ ಬಿಎಲ್, ನಿರ್ದೇಶಕರಾದ ಅಶೋಕ್, ಕೇಶವ ಆಚಾರ್ಯ, ಸುಧೀರ್ ಮಡಿವಾಳ, ಕರುಣಾಕರ ಪೂಜಾರಿ, ಆಶಾ, ಶೃತಿ, ಯಶೋಧ, ಸಿಬ್ಬಂದಿಗಳಾದ ಸಿಂಚನ, ಪ್ರಸಾದ್ ನಾಯ್ಕ ಇದ್ದರು. ಅನುಷಾ ಎಸ್.ಕಾರ್ಕಳ ನಿರೂಪಿಸಿದರು.