ಜಿಲ್ಲೆ

ಸೀಮೆ ವ್ಯಾಪ್ತಿಯ ಗ್ರಾಮಸಮಿತಿ ರಚನೆ : ಉಪ್ಪಿನಂಗಡಿ ದೇವಳ ಭಕ್ತರ ಸಭೆಯಲ್ಲಿ ರಾಧಾಕೃಷ್ಣ ನಾಕ್ ಮಾಹಿತಿ

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಶಾಸಕ ಅಶೋಕ್ ಕುಮಾರ್ ರೈ ಮತ್ತು ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ಪ್ರಯತ್ನದ ಫಲವಾಗಿ ದಕ್ಷಿಣಕಾಶಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅನುದಾನ ಒದಗಿಸುವ ಪ್ರಯತ್ನ ನಡೆಯುತ್ತಿದೆ. ಸೀಮೆ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿಯೂ ಭಕ್ತರನ್ನು ಒಳಗೊಂಡ ಗ್ರಾಮ ಸಮಿತಿ ರಚಿಸಲಾಗುವುದು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಕ್ ಹೇಳಿದರು.

ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಭಾನುವಾರ ಉಪ್ಪಿನಂಗಡಿ ಗ್ರಾಮದ ಭಕ್ತರ ಸಭೆಯಲ್ಲಿ ಮಾತನಾಡಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅರ್ತಿಲ ಕೃಷ್ಣ ರಾವ್, ದೇವಿದಾಸ್ ರೈ ಅಡೆಕ್ಕಲ್, ವೆಂಕಪ್ಪ ಪೂಜಾರಿ ಮಾತನಾಡಿದರು. ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಮಾಜಿ ಸದಸ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಂತ ಪೊರೋಳಿ, ಉಷಾ ಮುಳಿಯ, ಹರಿರಾಮಚಂದ್ರ, ಪ್ರಮುಖರಾದ ಯು.ರಾಮ, ವಿದ್ಯಾಲಕ್ಷ್ಮೀ ಪ್ರಭು, ಸುಜೀರ್ ಗಣಪತಿ ನಾಯಕ್, ರಾಮಚಂದ್ರ ಮಣಿಯಾಣಿ, ಸುಜಾತಾ ಕೃಷ್ಣ ಆಚಾರ್ಯ, ಚಂದ್ರಶೇಖರ್ ಮಡಿವಾಳ, ಸುರೇಶ್ ಅತ್ರಮಜಲು, ರವಿ ಕುಂಟಿನಿ, ಅಶೋಕ್ ಕುಮಾರ್ ರೈ ಅರ್ಪಿನಿಗುತ್ತು, ಶರತ್ ಕೋಟೆ, ಕಿಶೋರ್ ಜೋಗಿ, ಗಂಗಾಧರ ಟೈಲರ್ ಮತ್ತಿತರರಿದ್ದರು.