ಗಂಗಾವತಿ: ಆರೋಗ್ಯ ಸುರಕ್ಷತೆಯಲ್ಲಿ ಪ್ರತಿಯೊಬ್ಬರ ಪಾತ್ರ ಮುಖ್ಯವಾಗಿದ್ದು, ತಪಾಸಣೆ ಶಿಬಿರದ ಮೂಲಕ ಸಾರ್ವಜನಿಕರಿಗೆ ನೆರವಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದ ಔಷಧೀಯ ಭವನದಲ್ಲಿ ಔಷಧ ವ್ಯಾಪಾರಿಗಳ ಸಂಘದಿಂದ ಗುರುವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜನ ಸಾಮಾನ್ಯರ ಆರೋಗ್ಯ ಕಾಪಾಡುವ ಔಷಧ ವ್ಯಾಪಾರಿಗಳ ಕಾರ್ಯ ಶ್ಲಾಘನೀಯ. ಆರೋಗ್ಯ ತಪಾಸಣೆಯಂತಹ ಜನಹಿತ ಕಾರ್ಯಕ್ರಮಗಳು ನಿರಂತರ ನಡೆಸಬೇಕು ಎಂದರು.
ಸಂಘದ ಕಾರ್ಯಚಟುವಟಿಕೆ ಮತ್ತು ತಪಾಸಣೆ ಶಿಬಿರದ ಕುರಿತು ಜಿಲ್ಲಾ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಮಾಹಿತಿ ನೀಡಿದರು.
ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ್, ಕೆಪಿಸಿಸಿ ಮಾಧ್ಯಮ ವಕ್ತಾರೆ ಶೈಲಜಾ ಹಿರೇಮಠ, ವಕೀಲೆ ಸಂಧ್ಯಾ ಹೇರೂರು, ಸಂಘದ ಪ್ರಧಾನ ಕಾರ್ಯದರ್ಶಿ ಹನುಮರೆಡ್ಡಿ ಪಾಟೀಲ್ ಇತರರಿದ್ದರು
ಇದನ್ನೂ ಓದಿ: ಸದಸ್ಯರ ಶ್ರೇಯೋಭಿವೃದ್ಧಿಯೇ ಸಂಸ್ಥೆಯ ಗುರಿ: ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆಯ ಅಧ್ಯಕ್ಷ ಬಿ.ಲೋಕೇಶ್ ಹೇಳಿಕೆ
ಜನಾರ್ದನರೆಡ್ಡಿಗೆ ಸನ್ಮಾನ: ತಪಾಸಣೆ ಶಿಬಿರಕ್ಕೆ ಭೇಟಿ ನೀಡಿದ್ದ ಶಾಸಕ ಗಾಲಿ ಜನಾರ್ದನರೆಡ್ಡಿಯನ್ನು ಸಂಘದಿಂದ ಸನ್ಮಾನಿಸಲಾಯಿತು. ಆಗೋಲಿಯಲ್ಲಿ ಆಯುರ್ವೇದ ಆಸ್ಪತ್ರೆಗೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಆರಂಭವಾಗಿಲ್ಲ.
ಗಂಗಾವತಿ-ಬಳ್ಳಾರಿ ರಸ್ತೆ ಮೇಲ್ದರ್ಜೆಗೇರಿಸುವುದು, ತಾಲೂಕಿನಲ್ಲಿ ಕರಡಿ ಧಾಮ ನಿರ್ಮಾಣ, ಆನೆಗೊಂದಿ ಬಳಿ ತುಂಗಭದ್ರಾ ನದಿಗೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮತ್ತು ಜಯನಗರದ ಆಯುಷ್ ಆಸ್ಪತ್ರೆ ಕಾರ್ಯನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ಅಶೋಕಸ್ವಾಮಿ ಹೇರೂರು ಮನವಿ ಮಾಡಿದರು.
ಮುಖಂಡರಾದ ಸಂಧ್ಯಾ ಪಾರ್ವತಿ,ವೀರಣ್ಣ ಕಾರಂಜಿ, ರಘುನಾಥ ದರೋಜಿ,ರಾಜಶೇಖರಯ್ಯ ಭಾನಾಪೂರ, ನವೀನ ಚವ್ಹಾಣ, ಸಿ.ಚಿದಾನಂದ,ಔಷಧ ಮಾರಾಟ ಪ್ರತಿನಿಧಿಗಳಾದ ಜಗದೀಶ,ವಿಜಯ ಕುಮಾರ, ಅಜಯಕುಮಾರ ಇತರರಿದ್ದರು.