ಕಿನ್ನಿಗೋಳಿ: ಸ್ವಾತಂತ್ರ್ಯ ದಿನಾಚರಣೆಯ ಹಿಂದೆ ನೂರಾರು ದೇಶ ಭಕ್ತರ ಬಲಿದಾನವಿದೆ. ಅವರನ್ನು ನೆನಪಿಸುವ ಕಾರ್ಯ ನಿರಂತರ ಆಗಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ತಿರಂಗ ಯಾತ್ರೆ ಸಮಿತಿ ಮೂಲ್ಕಿ ಮೂಡುಬಿದಿರೆ ವತಿಯಿಂದ ಕಿನ್ನಿಗೋಳಿಯ ಬಟ್ಟಕೋಡಿಯಿಂದ ಕಾನ್ಸೆಟಾ ಆಸ್ಪತ್ರೆಯ ತನಕ ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಿನ್ನಿಗೋಳಿಯ ಸುಖಾನಂದ ಶೆಟ್ಟಿ ವೃತ್ತದಲ್ಲಿ ದಿ.ಸುಖಾನಂದ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಪ್ರಮುಖರಾದ ದಿನೇಶ್ ಪುತ್ರನ್, ಈಶ್ವರ್ ಕಟೀಲ್, ಸುನೀಲ್ ಆಳ್ವ, ಕಸ್ತೂರಿ ಪಂಜ, ಭುವನಾಭಿರಾಮ ಉಡುಪ, ಅಭಿಲಾಷ್ ಶೆಟ್ಟಿ ಕಟೀಲು, ವಿನೋದ್ ಬೊಳ್ಳೂರು, ರಂಜಿತ್ ಪೂಜಾರಿ, ವಿಠಲ ಮೂಲ್ಕಿ, ಭಾಸ್ಕರ ಶೆಟ್ಟಿ ಏಳಿಂಜೆ, ಪ್ರೇಮ್‌ರಾಜ್ ಬರ್ಕೆ, ರಾಜೇಶ್ ಕುಂದರ್, ಶೈಲೇಶ್ ಅಂಚನ್, ದೇವಿಪ್ರಸಾದ್ ರೈ, ರಾಜೇಶ್ ಶೆಟ್ಟಿ ಕೊಡೆತ್ತೂರು, ತಿಲಕ್ ರಾಜ್ ಶೆಟ್ಟಿ, ಮಿಥುನ್ ಆಚಾರ್ಯ, ರಮಾನಂದ ಪೂಜಾರಿ ಕಟೀಲು, ಹರೀಶ್ ಶೆಟ್ಟಿ ತಾಮಣಿಗುತ್ತು, ನಾಗರಾಜ್ ಒಂಟಿಕಟ್ಟೆ, ಕುಮಾರ್ ಪ್ರಸಾದ್, ಭರತ್ ಶೆಟ್ಟಿ, ಪುರುಷೋತ್ತಮ ಶೆಟ್ಟಿಗಾರ್, ಪ್ರಸಾದ್ ಭಂಡಾರಿ, ಸೋಮನಾಥ ಕೋಟ್ಯಾನ್, ಗೀತಾಲಕ್ಷ್ಮೀ ಶೇಣವ, ಗೋಪಾಲ್ ಪುನರೂರು, ಪೂರ್ಣಿಮಾ ಹಳೆಯಂಗಡಿ, ಆಶಾ ಸುವರ್ಣ, ಸುಜಯ ಶೆಟ್ಟಿ, ಸರೋಜಿನಿ ಗುಜರನ್ ಮತ್ತಿತರರು ಉಪಸ್ಥಿತರಿದ್ದರು.