ಸಂಡೂರು; ತಾಲೂಕಿನಾದ್ಯಂತ ಸಸಿಗಳನ್ನು ನೆಟ್ಟು ಸಂಡೂರು ಮೊದಲಿನಂತೆ ಕಾಣುವಂತೆ ಮಾಡಬೇಕಿದೆ ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.
ಇದನ್ನೂ ಓದಿ: ತಂಬಾಕು ಗಿಡಗಳಿಗೆ ಎರಡು ಬಾರಿ ಗೊಬ್ಬರ ಹಾಕಿ
ಪಟ್ಟಣದ ಪುರಸಭೆ ಆವರಣದಲ್ಲಿ ಮಂಗಳವಾರ ವಾಲ್ಮೀಕಿ ಹಾಗೂ ಅಂಬೇಡ್ಕರ್ ಟೌನ್‌ಹಾಲ್‌ಗೆ ಚೇರ್‌ಗಳು, ಮೈಕ್ ಸೆಟ್ ಹಾಗೂ ಎಂಟು ಜನ ಅಂಗವಿಕಲರಿಗೆ ವಿದ್ಯುತ್ ಚಾಲಿತ ತ್ರಿಚಕ್ರ ಸ್ಕೂಟರ್‌ಗಳನ್ನು ವಿತರಿಸಿ ಮಾತನಾಡಿದರು. ಸಾರ್ವಜನಿಕರ ಬೇಡಿಕೆಯಂತೆ ವಾಲ್ಮೀಕಿ ಹಾಗೂ ಅಂಬೇಡ್ಕರ್ ಭವನ ನಿರ್ಮಿಸಲಾಗಿದೆ. ಮದುವೆ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪೀಠೋಪಕರಣಗಳ ಅನುಕೂಲ ಕಲ್ಪಿಸಲಾಗಿದೆ ಎಂದರು.
ಸಂಚಾರ ಸಿಕ್ಕು ಹೆಚ್ಚಾಗಿರುವುದರಿಂದ ಅಂಗವಿಕಲರು ಎಚ್ಚರಿಕೆಯಿಂದ ಓಡಾಡಬೇಕು. ಸರ್ಕಾರಿ ಕಚೇರಿ, ಹೊಲಗಳ ಬದು ಹಾಗೂ ಮನೆಗಳ ಮುಂದೆ ಗಿಡಗಳನ್ನು ನೆಡಬೇಕು. ಆಮ್ಲಜನಕದ ಕೊರತೆಯಿಂದ ಉಸಿರಾಟದ ತೊಂದರೆಗಳು ಹೆಚ್ಚುತ್ತಿವೆ ಎಂದು ಶಾಸಕಿ ಅನ್ನಪೂರ್ಣ ತಿಳಿಸಿದರು.
ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಉಪಾಧ್ಯಕ್ಷೆ ಎಂ.ಸಿ.ಲತಾ, ಸದಸ್ಯರಾದ ಎಲ್.ಎಚ್.ಶಿವಕುಮಾರ್, ಕೆ.ವಿ.ಸುರೇಶ್, ಅಬ್ದುಲ್ ವಹಾಬ್, ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಆಶಾಲತಾ ಸೋಮಪ್ಪ, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ್, ಮುಖ್ಯಾಧಿಕಾರಿ ಕೆ.ಜಯಣ್ಣ, ವಾಲ್ಮೀಕಿ ಸಂಘದ ಅಧ್ಯಕ್ಷ ವದ್ದಟ್ಟಿ ಅಂಬರೀಷ್, ಆದಿ ಜಾಂಬವ ಸಂಘದ ಅಧ್ಯಕ್ಷ ನಿಂಗಪ್ಪ ಐಹೊಳೆ, ದಲಿತ ಸಂಘರ್ಷ ಸಮಿತಿ ಮಾಜಿ ಸಂಚಾಲಕ ರಾಮಕೃಷ್ಣ ಹೆಗಡೆ, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಪ್ರಮುಖರಾದ ಪಂಪಾಪತಿ, ಹಟ್ಟಿ ರತ್ಮಮ್ಮ ಕುಮಾರಸ್ವಾಮಿ, ಕೊಂಚಿಗೇರಿ ಹರೀಶ್, ಹನುಮೇಶ್, ಸಂತೋಷ್ ಜಾಧವ್, ಸಿ.ಅಶೋಕ, ಆಶಾ ನರಸಿಂಹ ಇತರರಿದ್ದರು.