ಜಿಲ್ಲೆ

ಪಾಲಕರಿಂದ ಮಕ್ಕಳಿಗೆ ಸಂಸ್ಕಾರದ ತಿಳಿವಳಿಕೆ : ರವೀಶ್ ಅನಿಸಿಕೆ

ಸೌಮ್ಯ ಆರ್

ಗುರುಪುರ: ತ್ಯಾಗಮಯಿಯಾದ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಮಕ್ಕಳ ಸಂಸ್ಕೃತಿ-ಸಂಸ್ಕಾರದ ಮೂಲ ಪಾಲಕರು. ಮಕ್ಕಳ ಜೀವನ ರೂಪಿಸುವಲ್ಲಿ ತಂದೆಯಷ್ಟೇ ಜವಾಬ್ದಾರಿ ತಾಯಿಗೂ ಇದೆ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಾಂತ ಪ್ರಮುಖ ರವೀಶ್ ಹೇಳಿದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಎಸ್ಪಿವೈಎಸ್ಸೆಸ್ ಕರ್ನಾಟಕ, ಕುಲಾಲ ಸಮಾಜ ಸಮುದಾಯ ಭವನ ಜೋಡುತಡಮೆ ಮಳಲಿ ಶಾಖೆ ವತಿಯಿಂದ ಭಾನುವಾರ ಮಳಲಿ ಕುಲಾಲ ಭವನದಲ್ಲಿ ಆಯೋಜನೆಗೊಂಡಿದ್ದ ಮಾತೃ ಧ್ಯಾನ, ಮಾತೃ ಪೂಜನ, ಮಾತೃ ವಂದನಾ, ಮಾತೃ ಭೋಜನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಯೋಗ ಬಂಧು ಸುನಂದಾ ಶುಭಹಾರೈಸಿದರು. ಸೌಮ್ಯಾ ಯೋಗ ಮತ್ತು ಮಾತೃ ವಂದನಾ, ಪೂಜನದ ಬಗ್ಗೆ ಮಾಹಿತಿ ನೀಡಿದರು. ಪ್ರಮುಖರಾದ ದಾಮೋದರ ಕುಲಾಲ, ವಿಶಾಲಾಕ್ಷಿ, ಉಮೇಶ್ ಅರ್ಬಿ, ಬೂಬ ಪೂಜಾರಿ ಮಳಲಿ, ಯೋಗ ಶಿಕ್ಷಕರು, ಯೋಗಬಂಧುಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ವಿಶಾಲಾಕ್ಷಿ ಸ್ವಾಗತಿಸಿದರು. ಸುಷ್ಮಿತಾ ವರದಿ ವಾಚಿಸಿದರು. ಕಸ್ತೂರಿ ವಂದಿಸಿದರು. ರೋಹಿಣಿ ನಿರೂಪಿಸಿದರು.