ಜಿಲ್ಲೆ

ಮಟ್ಕಾ ಅಡ್ಡೆಗೆ ದಾಳಿ, ಓರ್ವನ ಬಂಧನ

ಸೌಮ್ಯ ಆರ್

ಕಾಸರಗೋಡು: ಬದಿಯಡ್ಕ ಬಸ್ ನಿಲ್ದಾಣ ವಠಾರದಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ವ್ಯಕ್ತಿಯನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ಈತನಿಂದ ದಂಧೆಗೆ ಬಳಸಿದ್ದನೆನ್ನಲಾದ 25,700 ರೂ. ಹಾಗೂ ಸಂಚಾರಕ್ಕೆ ಬಳಸಿದ್ದ ಕಾರನ್ನು ವಶಪಡಿಸಲಾಗಿದೆ. ಸೂರಬೈಲ್ ನಿವಾಸಿ ರಾಜೇಶ್ ಬಂಧಿತ. ಸ್ಪೆಷಲ್ ಬ್ರಾಂಚ್ ಪೊಲೀಸರು ನೀಡಿದ ಮಾಹಿತಿಯನ್ವಯ ಎಸ್‌ಐ ಸುಮೇಶ್‌ಬಾಬು ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.