ಜೋಡುರಸ್ತೆ ಬಿಆರ್‌ಕೆ ವೃತ್ತದಲ್ಲಿ ಮಿಲಾದ್ ರ‌್ಯಾಲಿ ನಡೆಯಿತು. ಅಹ್ಮದ್ ಶರೀಫ್, ಮುಹಮ್ಮದ್ ಶರೀಫ್, ನಾಸಿರ್ ಶೇಖ್ ಮೊದಲಾದವರಿದ್ದರು 
ಜಿಲ್ಲೆ

ಮಾದಕ ವಸ್ತುಗಳಿಂದ ದೂರವಿದ್ದರೆ ಲಾಭ

ಇಂದಿರಾ ಎನ್ ಕೆ

ಕಾರ್ಕಳ: ತಂಬಾಕು, ಮದ್ಯ, ಮಾದಕ ದ್ರವ್ಯಗಳಿಂದ ದೂರವಿದ್ದಷ್ಟೂ ಅನುಕೂಲ ಎಂದು ಸರ್ ಹಿಂದ್ ಇಸ್ಲಾಮಿಕ್ ಅಕಾಡೆಮಿ, ತ್ವೈಭಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಹೇಳಿದರು.

ಕುಕ್ಕುಂದೂರಿನ ಜೋಡುರಸ್ತೆ ಬಿಆರ್‌ಕೆ ವೃತ್ತದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈವ ಸಲ್ಲಮರ ಜನ್ಮದಿನದ ಅಂಗವಾಗಿ ಹಯಾತುಲ್ ಇಸ್ಲಾಂ ಅಸೋಸಿಯೇಷನ್, ಬಂಗ್ಲೆಗುಡ್ಡೆ ಸಲ್ಮಾನ್ ಜುಮಾ ಮಸ್ಜಿದ್ ಸರ್ ಹಿಂದ್ ಅಕಾಡೆಮಿ, ತ್ವೈಭಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಬೃಹತ್ ಮಿಲಾದ್ ಸಂದೇಶ ರ‌್ಯಾಲಿ ಉದ್ದೇಶಿಸಿ ಮಾತನಾಡಿದರು.

ವಿದ್ವಾಂಸ ಇಬ್ರಾಹಿಂ ಫೈಝಿ ಧ್ವಜಾರೋಹಣಗೈದರು. ಅಲವಿ ಫಜಲಿಲ್ ಅಲ್ ಜೆಫ್ರಿ ತಂಙಳ್ ಮಿಲಾದ್ ರ‌್ಯಾಲಿಗೆ ಚಾಲನೆ ನೀಡಿದರು. ಮುಹಮ್ಮದ್ ಶರೀಫ್, ನಾಸಿರ್ ಶೇಖ್, ಸಹೀದ್ ರಝಾ, ರಜ್ಜಬ್ ಎ.ಕೆ, ಬಷೀರ್, ಹನೀಫ್, ರಜಬ್ ಪರನಿರ್, ನೂರುದ್ದೀನ್, ಅಬ್ದುಲ್ ರಹಿಮಾನ್, ಅಬ್ದುಲ್ಲಾ ಶೇಖ್, ಝೈನುಲ್ ಅಭಿದ್ ಸಖಾಫಿ, ಅಬ್ದುಲ್ ಖಾದರ್ ಮದನಿ, ಮೆಹಮೂದ್ ಜುಹಾರಿ, ಅಷ್ಪಾಕ್ ಅಹಮದ್, ಶಮೀಮ್ ಸಹದಿ, ಇಸ್ಮಾಯಿಲ್ ಮಾಸ್ಟರ್, ದಾವೂದ್, ರಫೀಕ್, ಮುಬೀನ್, ಅಲ್ತಾಫ್, ನವಾಝ್ ಶರೀಫ್, ಫಯಾಜ್, ಮಯ್ಯದಿ, ಕೆ.ಹಸನ್ ಉಪಸ್ಥಿತರಿದ್ದರು.