ಜಿಲ್ಲೆ

ಮರೂರು ದೇವಳ ವಾರ್ಷಿಕ ಪೂಜೆ, ಭಜನೋತ್ಸವ

ಬೆಳ್ವೆ: ಬೆಳ್ವೆ ಸಮೀಪದ ಮರೂರು ದರ್ಖಾಸು ಶ್ರೀ ಸಪರಿವಾರ ನಾಗಬ್ರಹ್ಮ ದೇವಸ್ಥಾನದ 12ನೇ ವರ್ಷದ ವಾರ್ಷಿಕ ಪೂಜೆ, ಶ್ರೀ ನಾಗಬ್ರಹ್ಮ ಭಜನಾ ಮಂಡಳಿ ಪ್ರಥಮ ವರ್ಷದ ಭಜನೋತ್ಸವ ಫೆ.15ರಂದು ನಡೆಯಲಿದೆ. ಬೆಳಗ್ಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ವಾರ್ಷಿಕ ಪೂಜೆ, ತೀರ್ಥ ಪ್ರಸಾದ ವಿತರಣೆ, ರಾತ್ರಿ 8.30ಕ್ಕೆ ಅನ್ನಸಂತರ್ಪಣೆ, ಸಂಜೆ 6ರಿಂದ ರಾತ್ರಿ 1ರ ತನಕ ಮರೂರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಶೇಡಿಮನೆ ಶ್ರೀ ಜಲದುರ್ಗಾಪರಮೇಶ್ವರಿ ಭಜನಾ ಮಂಡಳಿ, ಯಳಂತೂರು ಶ್ರೀ ದುರ್ಗಾ ಭಜನಾ ಮಂಡಳಿ, ಆರ್ಡಿ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಬೆಳ್ವೆ ಶ್ರೀರಾಮ್ ಭಜನಾ ಮಂಡಳಿ, ಬೆಪ್ಡೆ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ, ಹಿಲಿಯಾಣ ಶ್ರೀ ಯೋಗಾರೂಢ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ ತಂಡದವರಿಂದ ಭಜನೋತ್ಸವ ನಡೆಯಲಿದೆ.