ಜಿಲ್ಲೆ

ಜೀವ-ಜೀವನ ಎರಡನ್ನೂ ಕಿತ್ಕೊಂಡ ಕರೊನಾ: 10ನೇ ವರ್ಷದ ಮದ್ವೆ ಸಂಭ್ರಮದ ಹಿಂದಿನ ದಿನವೇ ಮೃತ್ಯು ಕೇಕೆ

ಬಾಗಲಕೋಟೆ: ಹತ್ತನೇ ವರ್ಷದ ಮದುವೆ ಸಂಭ್ರಮದ ಹಿಂದಿನ ದಿನವೇ ಮಹಾಮಾರಿ ಕರೊನಾ ವೈರಸ್​

ನಿಂದಾಗಿ ಬಾಗಲಕೋಟೆ ಮನೆಯೊಂದರಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಬೆಡ್ ಮತ್ತು ಆಕ್ಸಿಜನ್ ಸೂಕ್ತ ಸಮಯದಲ್ಲಿ ಸಿಗದೇ ಮಹಿಳೆಯೊಬ್ಬರ ಕಣ್ಣೇದುರಲ್ಲೇ ಆಕೆಯ ಪತಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಮನಕಲಕುವ ಘಟನೆ ನಡೆದಿದ್ದು, ಈಗ ಕುಟುಂಬದಲ್ಲಿ ಬರೀ ಕಣ್ಣೀರು ತುಂಬಿಕೊಂಡಿದೆ.

ಬಾಗಲಕೋಟೆ ಮೂಲದ ಬೀಳಗಿ ಪಟ್ಟಣದಲ್ಲಿ ವಾಸ ಇದ್ದ ಗುರುಶಾಂತಯ್ಯ ಹಿರೇಮಠ ಕುಟುಂಬದ ಕಣ್ಣೀರ ಕತೆ ಇದು. 40 ವರ್ಷದ ಟಂಟಂ ಚಾಲಕ ಗುರುಶಾಂತಯ್ಯ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ಗಂಟೆಯಾದರೂ ಆಕ್ಸಿಜನ್ ಸಿಗದೆ ಸಾವಿಗೀಡಾಗಿದ್ದಾರೆ. ಕರೊನಾ ಒಂದನೇ ಅಲೆ ಜೀವನ ಕಿತ್ತುಕೊಂಡಿತ್ತು. ಇದೀಗ ಎರಡನೇ ಅಲೆ ಜೀವವನ್ನೇ ಬಲಿ ತೆಗೆದುಕೊಂಡಿದೆ.

ಮನೆ ಎದುರು ನಿಂತಿರುವ ಟಂಟಂ ಸಾಲ ಕೂಡ ಇನ್ನು ಮುಗಿದಿಲ್ಲ. ಇದೀಗ ಬಾಡಿಗೆ ಮನೆಯಲ್ಲಿ ಎರಡು ಪುಟ್ಟ ಮಕ್ಕಳ ಜತೆ ವಾಸವಿರುವ ತಾಯಿಯು ಸಂಕಷ್ಟದ ಬದುಕು ಸಾಗಿಸುವಂತಾಗಿದೆ.