ಜಿಲ್ಲೆ

ಮಾರಣಕಟ್ಟೆ ದೇವಸ್ಥಾನ ಪರಿಸರ ಸ್ವಚ್ಛತಾ ಅಭಿಯಾನ

ಇಂದಿರಾ ಎನ್ ಕೆ

ಕುಂದಾಪುರ: ಪ್ರಾಣ ಪ್ರತಿಷ್ಠಾನ ಸಂಸ್ಥೆ ವತಿಯಿಂದ ಶ್ರೀ ಪೃಥ್ವಿನ್ ಹಾಗೂ ಯೋಗಾಚಾರ್ಯ ವಿನೋದ್ ಮಾರ್ಗದರ್ಶನದಲ್ಲಿ ಚಿತ್ತೂರು ಗ್ರಾಪಂ ಸಹಕಾರದೊಂದಿಗೆ ಮಾರಣಕಟ್ಟೆ ದೇವಸ್ಥಾನ ಪರಿಸರ ಸ್ವಚ್ಛತಾ ಅಭಿಯಾನ ಭಾನುವಾರ ನಡೆಯಿತು.

ಜೆಸಿಐ ಶಾಂಭವಿ ಮೂಲ್ಕಿ ಹಾಗೂ ಶ್ರೀ ರಾಮ ಸೇವಾ ಮಂಡಳಿ ಕಾರ್ನಾಡ್ ಮೂಲ್ಕಿ ಹಾಗೂ ಚಿತ್ತೂರು ಗ್ರಾಪಂ ಸದಸ್ಯರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ದೇವಸ್ಥಾನದ ವಠಾರ ಸ್ವಚ್ಛಗೊಳಿಸಿದರು. 60ಕ್ಕೂ ಅಧಿಕ ಗೋಣಿ ಚೀಲದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲಾಯಿತು. ಮಾರಣಕಟ್ಟೆ ದೇವಸ್ಥಾನ ಆಡಳಿತ ಟ್ರಸ್ಟಿ, ಚಿತ್ತೂರು ಪಂಚಾಯಿತಿ ಅಧ್ಯಕ್ಷರು ರವೀಂದ್ರ ಶೆಟ್ಟಿ, ಪಿಡಿಒ ಸುಶೀಲಾ, ಚಿತ್ತೂರು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಸದಸ್ಯರು, ಜೆಸಿಐ ಶಾಂಭವಿ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ್, ಶ್ರೀರಾಮ ಸೇವಾ ಮಂಡಳಿ ಕೋಶಾಧಿಕಾರಿ ಕೇಶವ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.