ಮಾನ್ವಿ: ತಾಲೂಕಿನ ಕೊರವಿ ಗ್ರಾಮದಲ್ಲಿ ಬುಧವಾರ ಗ್ರಾಮಸ್ಥರು ಸಾಂಗ್ರಣಿ ಕಲ್ಲು ಎತ್ತುವ ಸ್ಪರ್ಧೆ ಏರ್ಪಡಿಸಿದ್ದರು. ಪ್ರಥಮ ಸ್ಥಾನ ಪಡೆದ ಪ್ರತಾಪ ನಾಯಕ ನಾಗನದೊಡ್ಡಿ 10 ತೊಲ ಬೆಳ್ಳಿ ಕಡಗ, ದ್ವಿತೀಯ ಬಹುಮಾನವಾಗಿ ಕೃಷ್ಣ ಕಲ್ಲೂರು 5 ತೊಲ ಬೆಳ್ಳಿ ಕಡಗ, ತೃತೀಯ ಬಹುಮಾನವಾಗಿ ಹಂಪಯ್ಯನಾಯಕ ಕುಕನೂರು 3 ತೊಲ ಬೆಳ್ಳಿ ಕಡಗ ಪಡೆದುಕೊಂಡರು.
50 ಹಾಗೂ 80 ಕೆ.ಜಿ. ತೂಕದ ಸಾಂಗ್ರಣಿ ಕಲ್ಲುಗಳನ್ನು ಎತ್ತುವ ಸ್ಪರ್ಧೆ ಏರ್ಪಡಿಸಲಾಗಿತ್ತು. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಪ್ರಥಮ ಬಹುಮಾನ, ಸಜ್ಜಲ್ ಈರಪ್ಪ ದ್ವಿತೀಯ ಬಹುಮಾನ, ಗ್ರಾಪಂ ಸದಸ್ಯ ಕರಡಿ ಮಹೇಶ ತೃತೀಯ ಬಹುಮಾನವನ್ನು ಪ್ರಯೋಜಿಸಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಶರಣಪ್ಪ ಮುಗಲದೊಡ್ಡಿ, ಕೊರವಯ್ಯ ದಳವಾಯಿ, ವೀರರೆಡ್ಡಿ, ಈರರೆಡ್ಡಿ ಕೊಸಗಿ, ಯಲ್ಲಪ್ಪ ಬಡಿಗೇರ, ಡಂಗಿ ಭೀಮ, ಭೀಮಯ್ಯ ಕೊರವಿ, ಪ್ರಭುಸ್ವಾಮಿ, ಮೇಸ್ತ್ರಿ ಈರಪ್ಪ ಇತರರಿದ್ದರು.