ಸಿಂಧನೂರಿನ ಶಾಸಕ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ಸಿಗಲಿ ಎಂದು ಹರಕೆಯೊತ್ತು ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಂಬಾಮಠದ ಅಂಬಾದೇವಿ ಸನ್ನಿಧಿಗೆ ಪಾದಯಾತ್ರೆ ನಡೆಸಿತು. ನ್ಯಾಯವಾದಿ ಎಂ.ಅಮರೇಗೌಡ, ವೈ.ಅನಿಲಕುಮಾರ, ಖಾಜಿ ಮಲ್ಲಿಕ್ ವಕೀಲ, ಪ್ರಭುರಾಜ ಕರ್ಪೂರಮಠ, ರಂಗಾರೆಡ್ಡಿ ಸಾಸಲಮರಿ ಇದ್ದರು. 
ಜಿಲ್ಲೆ

ಮಂತ್ರಿಗಿರಿ ಹರಕೆ, ಅಂಬಾಮಠಕ್ಕೆ ಪಾದಯಾತ್ರೆ

ರುದ್ರಪ್ಪ ವಾಲಿ

ಸಿಂಧನೂರು: ಐದು ಬಾರಿ ಶಾಸಕರಾಗಿರುವ ಹಂಪನಗೌಡ ಬಾದರ್ಲಿ ಅವರಿಗೆ ಸಚಿವ ಸ್ಥಾನ ಸಿಗುವಂತಾಗಲಿ ಎಂದು ಹರಕೆಯೊತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೈ.ಅನಿಲ್‌ಕುಮಾರ್ ನೇತೃತ್ವದಲ್ಲಿ ಶುಕ್ರವಾರ ಅಂಬಾಮಠಕ್ಕೆ ಪಾದಯಾತ್ರೆ ನಡೆಸಲಾಯಿತು.

ಸಿಂಧನೂರಿನ ಅಂಬಾದೇವಿ ದೇವಸ್ಥಾನದಿಂದ ಆರಂಭಗೊಂಡ ಪಾದಯಾತ್ರೆಗೆ ಎಂ.ಅಮರೇಗೌಡ ವಕೀಲ ಚಾಲನೆ ನೀಡಿದರು. ನಂತರ ಅಂಬಾಮಠದವರೆಗೆ ಪಾದಯಾತ್ರೆ ನಡೆಸಿ, ಅಂಬಾದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರ ಘಟಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿಮಲಿಕ್, ಪ್ರಮುಖರಾದ ಪ್ರಭುರಾಜ ಕರ್ಪೂರಮಠ, ರಂಗಾರೆಡ್ಡಿ ಸಾಸಲಮರಿ, ಬಸವರಾಜ ಬಿ, ವೆಂಕನಗೌಡ ಎಂ., ಲಿಂಗರಾಜ ಸಾಸಲಮರಿ, ರಾಮಣ್ಣ ಸಾಸಲಮರಿ, ಲಿಂಗರಾಜ್ ಪಾಟೀಲ್, ಪ್ರಸಾದ್ ಬಿ, ಶರಣೇಗೌಡ ಪೊಲೀಸ ಪಾಟೀಲ, ಮರಿಯಪ್ಪ ಜಾಲಿಹಾಳ, ಲಕ್ಷ್ಮಣರಾವ್ ಮೂಡಲಗಿರಿಕ್ಯಾಂಪ್, ಕವಿತಾ ಇದ್ದರು.